newsics.com
ಮುಂಬೈ: ರೂಪದರ್ಶಿ ಹಾಗೂ ನಟಿ ನೇಹಾ ಶರ್ಮಾ ಹಾಟ್ ಚಿತ್ರವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.
ನಾನು ಸ್ನಾನ ಮಾಡಿ ಬಂದಿದ್ದೇನೆ.. ಬದಲಾಯಿಸಿದ್ದೇನೆ ಎಂಬ ವಾಕ್ಯ ಕೂಡ ಚಿತ್ರದ ಜತೆ ಬರೆದುಕೊಂಡಿದ್ದಾರೆ.
ಮೂಲತ: ಬಿಹಾರದ ನಿವಾಸಿಯಾಗಿರುವ ನೇಹಾ ಶರ್ಮಾ ತೆಲುಗು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶ ಮಾಡಿದ್ದರು.
ಬಿಹಾರದ ಬಾಗಲ್ಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ನೇಹಾ ಶರ್ಮಾ, ಪ್ಯಾಷನ್ ಡಿಸೈನ್ ಕೋರ್ಸ್ ಮಾಡಿದ್ದಾರೆ. ಕಥಕ್ ನೃತ್ಯ ಕಲಾವಿದೆಯಾಗಿದ್ದಾರೆ.
2007ರಲ್ಲಿ ತೆಲುಗು ಚಿತ್ರ ಚಿರುತ ದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನೇಹಾ ಶರ್ಮಾ, ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.
ಮೋಹಿತ್ ಸೂರಿ ನಿರ್ದೇಶಿಸಿದ ಕ್ರೂಕ್ , ನೇಹಾ ಶರ್ಮಾ ಅಭಿನಯಿಸಿದ ಮೊದಲ ಹಿಂದಿ ಚಿತ್ರ. ತಂದೆ ಅಜಿತ್ ಶರ್ಮಾ ಉದ್ಯಮಿ. ಇದೀಗ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರಾಗಿಯೂ ಆಯ್ಕೆಯಾಗಿದ್ದರು.
ಬಾಲ್ಯದಲ್ಲಿ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ನೇಹಾ ಶರ್ಮಾ ಇದೀಗ ಗುಣಮುಖರಾಗಿದ್ದಾರೆ.