ಮುಂಬೈ: ಸದಾ ವಿವಾದ ಸೃಷ್ಟಿಸುವ ಕಂಗನಾ ರಣಾವತ್ ಜತೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ಆದರೇ ಅದರಲ್ಲಿ ರಾಜಕೀಯ ಮಾತ್ರ ಇರಲಿಲ್ಲ ಎಂದು ನಟಿ ರಿಚಾ ಛಡ್ಡಾ ಹೇಳಿದ್ದಾರೆ. ಕಂಗನಾ ಅಭಿನಯದ ಪಂಗಾ ಚಿತ್ರದಲ್ಲಿ ರಿಚಾ ಕೂಡ ನಟಿಸಿದ್ದಾರೆ. ವಿರುದ್ಧವಾದ ರಾಜಕೀಯ ವಿಚಾರಧಾರೆಗಳನ್ನು ನಾವಿಬ್ಬರು ಹೊಂದಿದ್ದೇವೆ. ಇದೇ ವೇಳೆ ಇನ್ನೊಬ್ಬರ ಮೇಲೆ ಬಲವಂತವಾಗಿ ನಮ್ಮ ಸಿದ್ದಾಂತವನ್ನು ಹೇರುವುದು ಕೂಡ ತಪ್ಪು ಎಂದು ನನಗೆ ತಿಳಿದಿದೆ. ಹೀಗಾಗಿ ರಾಜಕೀಯ ಬಿಟ್ಟು ಉಳಿದ ಎಲ್ಲ ವಿಷಯಗಳ ಬಗ್ಗೆ ಚರ್ಚಿಸುತ್ತಿದೆ ಎಂದು ರಿಚಾ ಛಡ್ಡಾ ತಿಳಿಸಿದ್ದಾರೆ.