ಮುಂಬೈ: ಬರೀ ನಟಿ ಆಗಿರುವುದಷ್ಟೇ ನನ್ನ ಕನಸಲ್ಲ ಎಂದಿರುವ ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್, ಸಿನಿಮಾ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.
ತಮಿಳು ಚಿತ್ರರಂಗದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಈಗ ಮತ್ತೆ ಕಾಲಿವುಡ್ ಗೆ ರಿ- ಎಂಟ್ರಿ ಕೊಟ್ಟಿದ್ದಾರೆ.
ಕಂಗನಾ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಲೈವಿಯಲ್ಲಿ ನಟಿಸುತ್ತಿದ್ದು, ಈಗ ಅದರ ಇನ್ನೊಂದು ಸ್ಟಿಲ್ ನಲ್ಲಿ ಕಂಗನಾ ಭರತನಾಟ್ಯ ಪೋಸ್ ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಕಂಗನಾ, ಜಯಲಲಿತಾ ಅವರು ನನ್ನ ರೀತಿಯಲ್ಲ. ಅವರೊಬ್ಬ ಗ್ಲಾಮರಸ್ ಸ್ಟಾರ್. ಉದಾಹರಣೆಗೆ ಬಾಲಿವುಡ್ ನ ಐಶ್ವರ್ಯ ರೈ ಇದ್ದ ಹಾಗೆ. ಇದೊಂದು ನನಗೆ ಬಹು ದೊಡ್ಡ ಸವಾಲಾಗಿತ್ತು. ಆ ಪಾತ್ರಕ್ಕೆ ಸರಿ ಹೊಂದಿಕೊಳ್ಳಬೇಕಾಗಿತ್ತು. ಅವರು ಸಹ ಇಷ್ಟವಿಲ್ಲದೆ ನಟನಾ ಕ್ಷೇತ್ರಕ್ಕೆ ಬಂದಿದ್ದು, ನಾನು ಅವರ ಹಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೊಂಬೆಯಂತೆ ಇರುವುದಕ್ಕಿಂತ ಇನ್ನೂ ಏನಾದರೂ ಮಾಡಬೇಕೆಂಬ ನಿಟ್ಟಿನಲ್ಲಿ ಅವರು ರಾಜಕಾರಣಿಯಾದರು. ನಾನು ಸಹ ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದೇನೆ ಎಂದು ಹೇಳಿದರು.
ನಟನೆಯಷ್ಟೇ ಅಲ್ಲ, ಸಿನಿಮಾ ನಿರ್ಮಿಸುವೆ- ಕಂಗನಾ ಕನಸು
Follow Us