newsics.com
ಮುಂಬೈ: ಚಿತ್ರರಂಗದಲ್ಲಿ ವರ್ಣಭೇದ ನೀತಿಯಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಚಿತ್ರರಂಗವು ಸ್ವಜನ ಪಕ್ಷಪಾತಕ್ಕಿಂತ (ನೆಪೋಟಿಸಂ) ಹೆಚ್ಚಾಗಿ, ವರ್ಣಭೇದ ನೀತಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನನ್ನ ಅಪಿಯರೆನ್ಸ್ ನಿಂದಾಗಿ ಅನೇಕ ವರ್ಷಗಳಿಂದ ತಿರಸ್ಕರಿಸಲ್ಪಟ್ಟಿದ್ದೇನೆ. ಆದರೆ ಈ ಕುರಿತು ನಾನು ಈಗ ದೂರು ನೀಡಲು ಸಾಧ್ಯವಿಲ್ಲ. ವರ್ಣಬೇಧ ನೀತಿಯ ವಿರುದ್ಧ ಹಲವು ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ ಎಂದು ನವಾಜುದ್ದೀನ್ ಹೇಳಿದ್ದಾರೆ.
ಗಾಢ ಮೈಬಣ್ಣ ಹೊಂದಿರುವ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದು, ಅದು ಖುಷಿಯ ವಿಚಾರ ಎಂದು ಅವರು ಹೇಳಿದರು.