newsics.com
ಪಶ್ಚಿಮ ಬಂಗಾಳ : ಪದ್ಮಶ್ರೀ ಪುರಸ್ಕೃತ ನಿರ್ದೇಶಕ ತರುಣ್ ಮಜುಂದಾರ್ ಇಂದು ನಿಧನರಾಗಿದ್ದಾರೆ. 91 ವರ್ಷ ಪ್ರಾಯದ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತರುಣ್ ಮಜುಂದಾರ್ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ ಎಸ್ಎಸ್ಕೆಎಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು .
ಕಂಚರ್ ಸ್ವರ್ಗ’, ‘ನಿಮಂತ್ರಣ’, ‘ಗಣದೇವತೆ’ ಮತ್ತು ‘ಅರಣ್ಯ ಅಮರ್’ ಚಿತ್ರಗಳಿಗೆ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ತರುಣ್ 2021 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು.