ವಾಷಿಂಗ್ಟನ್: ಖ್ಯಾತ ನಟಿ ಹಾಗೂ ಬೇ ವಾಚ್ ಖ್ಯಾತಿಯ ಪಮೇಲಾ ಆಂಡರ್ ಸನ್ ತಮ್ಮ 52ನೇ ವಯಸ್ಸಿನಲ್ಲಿ ಐದನೇ ಬಾರಿ ಮದುವೆಯಾಗಿದ್ದಾರೆ. 72ರ ಹರೆಯದ ಜಾನ್ ಪೀಟರ್ ಅವರ ಕೈ ಹಿಡಿದಿದ್ದಾರೆ. ಕೇಶ ವಿನ್ಯಾಸಕಾರರಾಗಿ ಖ್ಯಾತಿಗಳಿಸಿರುವ ಪೀಟರ್, ಬ್ಯಾಟ್ ಮ್ಯಾನ್ ಚಿತ್ರದ ನಿರ್ಮಾಪಕರೂ ಆಗಿದ್ದಾರೆ. ನೂತನ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ