newsics.com
ಸ್ಯಾಂಡಲ್ವುಡ್ನಲ್ಲಿ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡ್ತಿರೋದ್ರ ನಡುವೆಯೇ ರಾಕ್ಲೈನ್ ವೆಂಕಟೇಶ್ ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಹಾಗೂ ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ ಕಾಂಬಿನೇಷನ್ನಲ್ಲಿ ಹೊಸ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಈ ಪ್ಯಾನ್ ಇಂಡಿಯಾ ಸಿನಿಮಾಗೆ ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಇತ್ತು. ಆದರೆ ಸಿನಿಮಾದ ನಿರ್ಮಾಪಕರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದ್ದು ಶಿವಣ್ಣ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ರಾಕ್ಲೈನ್ ಎಂಟರ್ಟೈನ್ಮೆಂಟ್ ಬಂಡವಾಳ ಹೂಡಲಿದೆ. ಈ ಸಿನಿಮಾಗೆ ಕುಲದಲ್ಲಿ ಕೀಳ್ಯಾವುದು ಎಂದು ಟೈಟಲ್ ನೀಡಲಾಗಿದೆ. ಆದರೆ ಶೀರ್ಷಿಕೆ ಇನ್ನೂ ಅಧಿಕೃತಗೊಂಡಿಲ್ಲ.