Newsics.com
ಮುಂಬೈ: ನಟಿ ಪೂಜಾ ಬೇಡಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೊನಾ ಲಸಿಕೆ ಪಡೆದಿರಲಿಲ್ಲ. ರೋಗ ನಿರೋಧಕ ಶಕ್ತಿ ತನ್ನಿಂದತಾನೇ ಅಭಿವೃದ್ಧಿಯಾಗಲಿ ಎಂದು ಬಯಸಿದ್ದೆ. ಆದರೆ, ಇದೀಗ ಕೊರೊನಾ ಸೋಂಕಿಗೆ ತುತ್ತಾಗಿದ್ದೇನೆ ಎಂದು ಪೂಜಾ ಬೇಡಿ ಹೇಳಿದ್ದಾರೆ. ಕೊರೊನಾ ಲಸಿಕೆ ಪಡೆಯದೇ ಇರುವುದು ನನ್ನ ವೈಯಕ್ತಿಕ ತೀರ್ಮಾನವಾಗಿತ್ತು ಎಂದು ಪೂಜಾ ಬೇಡಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಬೋಲ್ಡ್ ಅಭಿನಯಕ್ಕಾಗಿ ಪೂಜಾ ಬೇಡಿ ಖ್ಯಾತಿ ಪಡೆದಿದ್ದರು.