ಹೈದರಾಬಾದ್: ಅಲ್ಲು ಅರವಿಂದ್ ಜೊತೆಗಿನ ಹೊಸ ಸಿನಿಮಾ ಬಿಡುಗಡೆ ಖುಷಿಯಲ್ಲಿದ್ದಾರೆ ಕನ್ನಡಿತಿ ಪೂಜಾ ಹೆಗ್ಡೆ. ತಮ್ಮ ಹೊಸ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ನಟ ಅಲ್ಲು ಅರವಿಂದ್ ಸೇರಿದಂತೆ ಚಿತ್ರದ ಪ್ರಮುಖ ತಾರೆಯರು ಪಾರ್ಟಿ ಮಾಡಿದರು. ಟ್ವಿಟರ್ ನಲ್ಲಿ ತಮ್ಮ ಖುಷಿ ಹಂಚಿಕೊಂಡಿರುವ ಪೂಜಾ ಹೆಗ್ಡೆ ಕಠಿಣ ಪರಿಶ್ರಮದ ಬಳಿಕ ಇದೀಗ ಪಾರ್ಟಿ ಮೂಡ್ ಎಂದು ಟ್ವೀಟ್ ಮಾಡಿದ್ದಾರೆ.