newsics.com
ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಕರ್ನಾಟಕ ಮೂಲದ ನಟೆ ಪೂಜಾ ಹೆಗ್ಡೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಪ್ರೊಡ್ರಕ್ಷನ್ ಹೌಸ್ ನಿರ್ಮಿಸುತ್ತಿರುವ ಎರ಼ಡು ಚಿತ್ರಗಳಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಇದು ವದಂತಿಯಲ್ಲಿ ಸ್ವಲ್ಪ ಸತ್ಯ ಇದೆ ಎಂಬ ಭಾವನೆ ಮೂಡಿಸಿದೆ.
56ರ ಹರೆಯದ ಸಲ್ಮಾನ್ ಖಾನ್ ಮದುವೆಯಾಗದೆ ಉಳಿದಿರುವುದು ಹಿಂದಿ ಚಿತ್ರರಂಗದ ಅಚ್ಚರಿಗಳಲ್ಲಿ ಒಂದಾಗಿದೆ. ಈ ಹಿಂದೆ ಸಲ್ಮಾನ್ ಖಾನ್ ನೇತೃತ್ವದ ವಿಶ್ವ ಸಂಗೀತ ಕಾರ್ಯಕ್ರಮಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆಯ್ಕೆಯಾಗಿದ್ದರು.
ವಂಚಕ ಸುಕೇಶ್ ಚಂದ್ರಶೇಖರ್ ಹಗರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಪೂಜಾ ಹೆಗ್ಡೆಯನ್ನು ಅಂದು ಆಯ್ಕೆ ಮಾಡಲಾಗಿತ್ತು.