newsics.com
ವಾರಾಣಸಿ: ಖ್ಯಾತ ನಟಿ ಪೂಜಾ ಹೆಗ್ಡೆ ವಾರಣಸಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಗಾ ಆರತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ.
ಈ ಕುರಿತ ಚಿತ್ರಗಳನ್ನು ಪೂಜಾ ಹೆಗ್ಡೆ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಲವು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಈ ಹಿನ್ನೆಲೆಯಲ್ಲಿ ಸದಾಶಿವನ ಅನುಗ್ರಹ ಪಡೆಯಲು ವಾರಣಸಿಗೆ ಆಗಮಿಸಿರುವುದಾಗಿ ಪೂಜಾ ಹೆಗ್ಡೆ ತಿಳಿಸಿದ್ದಾರೆ.
ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.