ಸದಾಕಾಲ ತಮ್ಮ ಹಾಟ್ ವಿಡಿಯೋಗಳ ಮೂಲಕವೇ ಹಲ್ ಚಲ್ ಸೃಷ್ಟಿಸುತ್ತಿದ್ದ ಬಾಲಿವುಡ್ ಬಿಚ್ಚಮ್ಮ ಪೂನಂ ಪಾಂಡೆ ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿಡಲು ಮನಸ್ಸು ಮಾಡಿದ್ದು ಮೆಚ್ಚಿದ ಹುಡುಗನ ಜತೆ ಎಂಗೇಜ್ಮೆಂಟ್ ಮಾಡಿಕೊಂಡು ಪೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆ ಜತೆಗೆ ಪೂನಂ ಪಾಂಡೆ ವಿವಾಹವಾಗಲಿದ್ದು, ನಿಶ್ವಿತಾರ್ಥದ ವಿಚಾರವನ್ನು ಪೂನಂ ಭಾವೀ ಪತಿ ಸ್ಯಾಮ್ ಬಾಂಬೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪೂನಂ ಕೂಡ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಪರಸ್ಪರ ಬದಲಾಯಿಸಿಕೊಂಡಿರೋ ರಿಂಗ್ ಜತೆ ಸ್ಯಾಮ್ ಮತ್ತು ಪೂನಂ ಪೋಸ್ ಕೊಟ್ಟಿದ್ದು, ಈ ಪೋಟೋಗೆ ಅಭಿಮಾನಿಗಳು ಖುಷಿಯಿಂದ ಶುಭಾಶಯ ಕೋರುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವರು ಪೂನಂ ಕಾಲೆಳೆದು ಸ್ಯಾಮ್ ಅದೃಷ್ಟವಂತನೇ ಸರಿ ಎಂದಿದ್ದಾರೆ.
ಲಾಕ್ ಡೌನ್ ವೇಳೆಯಲ್ಲಿ ಸ್ಯಾಮ್ ಜತೆ ಸುತ್ತಾಡಲು ಹೋಗಿದ್ದ ಪೂನಂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಪರದಾಡಿದ್ದರು. ಇದೀಗ ಲಾಕ್ ಡೌನ್ ಮುಗಿಯುತ್ತಿದ್ದಂತೆ ಮದುವೆಯ ಸಿಹಿ ಸುದ್ದಿ ಕೊಟ್ಟಿದ್ದು ಮದುವೆ ಎಲ್ಲಿ ಯಾವಾಗ ಎಂಬ ಬಗ್ಗೆ ಪೂನಂ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಒಟ್ಟಿನಲ್ಲಿ ಸದಾಕಾಲ ತಮ್ಮ ಅಕೌಂಟ್’ನಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸುವ ವೀಡಿಯೋ ಮೂಲಕವೇ ಸುದ್ದಿಯಾಗುವ ಪೂನಂ ಈ ಬಾರಿ ಇಂತಹದೊಂದು ಒಳ್ಳೆಯ ಸಂಗತಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಪೂನಂ ಅಕೌಂಟ್’ನಲ್ಲಿ ಹೊಸ ಪೋಟೋ…! ಅಭಿಮಾನಿಗಳಿಗೆ ಶಾಕ್…!
Follow Us