newsics.com
ಮುಂಬೈ: ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಸೆಕ್ಸಿ ವಿಡಿಯೋವೊಂದನ್ನು ಹರಿಬಿಟ್ಟ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕವಾಗಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದಾರೆ.
ಮಾಡೆಲ್ ಪೂನಂ ಪಾಂಡೆ ಇದೀಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ವಿಡಿಯೋ ಹಂಚಿಕೊಂಡಿರುವ ಪೂನಂ ಪಾಂಡೆ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಪೂನಂ ಪಾಂಡೆ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ವೀವ್ಸ್ ಹಾಗೂ ಕಮೆಂಟ್ ಪಡೆದಿದೆ. ಬೋಲ್ಡ್ ಅವತಾರವನ್ನು ಹಲವರು ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಟೀಕಿಸಿದ್ದಾರೆ.
ಹಲವರಿಗೆ ಬೆತ್ತಲೇ ಆಫರ್ ನೀಡುತ್ತಲೇ ಸುದ್ದಿಯಾಗುತ್ತಿದ್ದ ಪೂನಂ ಪಾಂಡೆ 2020ರಲ್ಲಿ ಮದುವೆಯಾಗಿದ್ದಾರೆ. ಪೂನಂ ಪಾಂಡೆ ಬೆತ್ತಲೇ, ಹಾಟ್ ವಿಡಿಯೋಗಳ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ. 2020 ಹಾಗೂ 2021ರಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣದಿಂದ ಪೂನಂ ಪಾಂಡೆ ಜೈಲು ಸೇರಿದ್ದರು. ಸರ್ಕಾರಿ ಸ್ಥಳಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಆರೋಪದಲ್ಲಿ ವಿವಾದಿತ ನಟಿ ಕಂ ರೂಪದರ್ಶಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
View this post on Instagram