ನಿಬ್ಬೆರಗುಗೊಳಿಸುತ್ತಿರುವ ಪ್ರಣೀತಾ ಸುಭಾಷ್ ಯೋಗಾಭ್ಯಾಸ

Newiscs.com ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಉತ್ತಮ ಯೋಗಪಟು ಕೂಡ ಆಗಿದ್ದಾರೆ. ಮುಂಜಾನೆ ಯೋಗಾಭ್ಯಾಸ ತಪ್ಪಿಸುವುದಿಲ್ಲ. ಇದು ಅವರ ದಿನಚರಿಯ ಒಂದು ಭಾಗ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಯೋಗಾಭ್ಯಾಸದ ಚಿತ್ರಗಳನ್ನು ಅವರು ಶೇರ್ ಮಾಡಿದ್ದಾರೆ. ಯೋಗದ ಪ್ರಯೋಜನದ ಬಗ್ಗೆ ಹೇಳಿದ್ದಾರೆ. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಪ್ರಣೀತಾ ಸುಭಾಷ್ ಅವರು ತಮ್ಮ ನೇತೃತ್ವದ ಸ್ವಯಂ ಸೇವಾ ಸಂಸ್ಥೆಯ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಿದ್ದರು.