newsics.com
ಮುಂಬೈ: ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದ ಪ್ರಿಯಾಮಣಿ ‘ನನಗೆ ಶಾರುಖ್ ಖಾನ್ ಜತೆ ಕ್ರಶ್ ಆಗಿತ್ತು’ ಎಂದಿದ್ದಾರೆ.
ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರದಲ್ಲಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾಮಣಿ, ಈ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.
ಮದುವೆಯ ನಂತರವೂ ಅವಕಾಶಗಳನ್ನು ಪಡೆಯುತ್ತಿರುವ ಈ ನಟಿ ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 40 ವರ್ಷಗಳು ಸಮೀಪಿಸಿದರೂ ಪ್ರಿಯಾಮಣಿ ತುಂಬಾನೆ ಕ್ಯೂಟ್ ಆಗಿದ್ದಾರೆ. ಪ್ರಿಯಾಮಣಿ ಅವರ ನಿಜವಾದ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್. ಇಂಡಸ್ಟ್ರಿಗೆ ಬಂದ ಮೇಲೆ ಇಷ್ಟು ದೊಡ್ಡ ಹೆಸರು ಶಾರ್ಟ್ ಕಟ್ ಆಗಬೇಕು ಅನ್ನಿಸಿತು. ಆದ್ದರಿಂದಲೇ ತನ್ನ ಹೆಸರಿನ ಮಧ್ಯದ ಹೆಸರು ಮತ್ತು ಸರ್ ನೇಮ್ ತೆಗೆದು ಪ್ರಿಯಾಮಣಿ ಆದರು.
ಯಾರಿಗೆ ಯಾರ ಜತೆ ಕ್ರಶ್ ಇತ್ತು, ಯಾರಿಗೆ ಯಾರ ಜತೆ ಲವ್ ಅಫೇರ್ ಇತ್ತು ಎಂಬ ಸಂಗತಿಗಳೆಲ್ಲ ಒಂದೊಂದಾಗಿ ಹೊರಬರಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡತೊಡಗಿದೆ. ಇರಲಿ, ಇದೀಗ ಒಂದು ಸಂಗತಿ ಜಗಜ್ಜಾಹೀರಾಗಿದೆ, ನಿಮ್ಮೆಲ್ಲರ ಮನಸ್ಸಿನಲ್ಲಿ ಇಟ್ಟುಕೊಂಡಿರಿ.