newsics.com
ಹೈದರಾಬಾದ್: ವಿವಾಹ ವಿಚ್ಛೇದನದ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳಿಗೆ ಗುರಿಯಾಗಿರುವ ನಟಿ ಸಮಂತಾ ರುಥ್ ಪ್ರಭುಗೆ ನಟಿ ರಕುಲ್ ಪ್ರೀತ್ ಸಿಂಗ್ ಬೆಂಬಲ ಘೋಷಿಸಿದ್ದಾರೆ.
ಹೃದಯದ ಕೆಂಪು ಇಮೋಜಿ ಚಿತ್ರ ಪೋಸ್ಚ್ ಮಾಡಿ ನೈತಿಕ ಬೆಂಬಲ ಘೋಷಿಸಿದ್ದಾರೆ.
ಶುಕ್ರವಾರ ಸಮಂತಾ ಸಾಮಾಜಿಕ ಜಾಲ ತಾಣಗಳಲ್ಲಿ ವಿಚ್ಛೇದನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು.
ಅನೈತಿಕ ಸಂಬಂಧ ಆರೋಪ, ಗರ್ಭಪಾತ ಹೀಗೆ ಹತ್ತು ಹಲವು ವದಂತಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ರಕುಲ್ ಪ್ರೀತ್ ಸಿಂಗ್ ತೆಲುಗಿನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಡ್ರಗ್ಸ್ ಪ್ರಕರಣ ಸಂಬಂಧ ಎನ್ ಸಿ ಬಿ, ರಕುಲ್ ಪ್ರೀತ್ ಸಿಂಗ್ ಅವರನ್ನು ವಿಚಾರಣೆಗೆ ಗುರಿಪಡಿಸಿತ್ತು.