newsics.com
ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನಿಗಾಗಿ ಪ್ರಾರ್ಥಿಸುವಂತೆ ರಾಖಿ ಸಾವಂತ್ ತನ್ನ ಅಭಿಮಾನಿಗಳನ್ನು ಕೋರಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ರಾಖಿ ಸಾವಂತ್ ಈ ವಿನಂತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಯಾರು ಪ್ರಾಮಾಣಿಕರೆಂದು ನನಗೆ ತಿಳಿದಿಲ್ಲ ಎಂದು ರಾಖಿ ಹೇಳಿದ್ದಾರೆ.
“ನೀವು ಸಿಂಹವಾಗಿದ್ದರೆ ಸಿಂಹದಂತೆ ಹೋರಾಡಿ, ನರಿ ಮತ್ತು ಮಗುವಿನ ಮೇಲೆ ಬೇಟೆಯಾಡಬೇಡಿ” ಎಂದು ಅವರು ಹೇಳಿದ್ದಾರೆ.