ಮುಂಬೈ: ನಟ-ನಟಿಯರೆಲ್ಲ ಅಂಗಾಂಗ ದಾನದಿಂದ ಹೆಸರು ಮಾಡುತ್ತಿರುವ ಬೆನ್ನಲ್ಲೇ ಎದೆಗಾತಿ ರಾಖಿ ಸಾವಂತ್ ಕೂಡ ತನ್ನ ಅಂಗಾಂಗ ದಾನದ ಮಾತನಾಡಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ.
ಹೌದು, ಇಷ್ಟಕ್ಕೂ ರಾಖಿ ಸಾವಂತ ದಾನಕ್ಕೆ ಮುಂದಾಗಿದ್ದು ಏನು ಗೊತ್ತಾ….ಆಕೆಯ ಆಕರ್ಷಕ ಸ್ತನಗಳನ್ನು. ಈ ಬಗ್ಗೆ ಖುದ್ದು ವಿಡಿಯೋ ಮಾಡಿ ತನ್ನ ಇನ್ ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿರೋ 29ರ ಹರೆಯದ ಮಾದಕ ಬೆಡಗಿ ರಾಖಿ ಸಾವಂತ್ ಐಶ್ವರ್ಯಾ ರೈ ಕಣ್ಣು ದಾನ ಮಾಡಿದ್ದಾರೆ. ಈ ಅಂಗಾಂಗ ದಾನದಿಂದ ನಾನು ಪ್ರೇರಿತಳಾಗಿದ್ದು ಅದಕ್ಕಾಗಿ ನನ್ನ ಸ್ತನಗಳನ್ನು ದಾನ ಮಾಡಲು ಬಯಸಿದ್ದೇನೆ ಎಂದಿದ್ದಾರೆ.
ಹೀಗೆ ಬೋಲ್ಡ್ ಆಗಿ ಸ್ತನದಾನ ನಿರ್ಧಾರಕ್ಕೆ ಬಂದಿರೋ ರಾಖಿ ಸಾವಂತ ವಿಡಿಯೋವನ್ನು ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ಸಂಖ್ಯೆಯ ಜನರು ವೀಕ್ಷಿಸಿದ್ದು ಸಾವಿರಾರು ಜನರು ರಾಖಿ ನಿರ್ಧಾರದ ಮೇಲೆ ಕಮೆಂಟ್ ಮಾಡ್ತಿದ್ದಾರೆ.
ಸ್ತನಕ್ಯಾನ್ಸರ್ ಗೆ ಒಳಗಾದವರಿಗೆ ಆ ಭಾಗವನ್ನು ರಿಮೂವ್ ಮಾಡಲಾಗುತ್ತೆ. ಹಾಗಾಗಿ ನಾನು ಆ ಭಾಗವನ್ನು ದಾನಮಾಡಲು ನಿರ್ಧರಿಸಿದ್ದೇನೆ. ನನ್ನ ಈ ನಿರ್ಧಾರಕ್ಕೆ ಜನ ಹೇಗೆ ಪ್ರತಿ ಕ್ರಿಯಿಸುತ್ತಾರೆ ಎನ್ನುವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಅಂತ ರಾಖಿ ವಿಡಿಯೋದಲ್ಲಿ ಹೇಳ್ಕೊಂಡಿದ್ದಾರೆ. ಆದರೇ ಹೀಗೆ ಸ್ತನದಾನಕ್ಕೆ ವೈದ್ಯಕೀಯ ವಿಜ್ಞಾನದಲ್ಲಿ ಅವಕಾಶ ಇದ್ಯಾ…ಇದ್ದರೇ ರಾಖಿ ಸ್ತನ ವನ್ನು ಇನ್ಯಾರಿಗಾದ್ರೂ ಅಳವಡಿಸಬಹುದಾ? ಅಳವಡಿಸಿಕೊಳ್ಳೋಕೆ ಯಾರಾದ್ರೂ ಮುಂದೆ ಬಂದಿದ್ದಾರಾ ಅನ್ನೋ ನಿಮ್ಮ ಕುತೂಹಲದ ಪ್ರಶ್ನೆಗೆ ರಾಖಿ ಸಾವಂತ ಮಾತ್ರ ಉತ್ತರ ನೀಡಬೇಕಷ್ಟೇ.