newsics.com
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾದ ರಕ್ಕಮ್ಮ ಹಾಡು ಇದೀಗಾಗಲೇ ಬಿಡುಗಡೆಯಾಗಿದ್ದು, ಹವಾ ಸೃಷ್ಟಿಸಿದೆ.
ಕಿಚ್ಚ ಸುದೀಪ್ ಈ ಹಾಡಿಗೆ ಕುಣಿದಿದ್ದು, ಅದನ್ನು ಜಾಕ್ಲಿನ್ ಫರ್ನಾಂಡೀಸ್ ಅವರಿಗೆ ಅರ್ಪಿಸಿದ್ದಾರೆ. ಒಂದು ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಹಾಕಿದ್ದು, “ಹೇ ಜಾಕಿ ಇದು ನಿಮಗಾಗಿ. ನಿಮ್ಮ ಆಸೆಯನ್ನು ಈಡೇರಿಸಿದ್ದೇನೆ. ಇದು ನನ್ನ ಮೊದಲ ರೀಲ್ಸ್” ಎಂದು ಬರೆದುಕೊಂಡಿದ್ದಾರೆ.
ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. 3 ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದು ಎಲ್ಲರಲ್ಲೂ ಕೂತೂಹಲ ಮೂಡಿಸಿದೆ.