Saturday, November 26, 2022

ಸೆಕ್ಸ್, ರೊಮ್ಯಾನ್ಸ್, ಅಫೇರ್ ಬಗ್ಗೆ ರಾಮ್’ಗೋಪಾಲ್ ವರ್ಮಾ- ಅರಿಯಾನಾ ಬೋಲ್ಡ್ ಮಾತು: ವಿಡಿಯೋ ವೈರಲ್ ಆಯ್ತು

Follow Us

newsics.com
ಹೈದರಾಬಾದ್: ವಿವಾದಾಸ್ಪದ ಮಾತು, ಹೇಳಿಕೆಗಳ‌ ಮೂಲಕವೇ ಆಗಾಗ ಸುದ್ದಿಯಾಗುವ ಖ್ಯಾತ ಬಾಲಿವುಡ್ ನಿರ್ದೆಶಕ ರಾಮ್’ಗೋಪಾಲ್ ವರ್ಮಾ (ಆರ್’ಜಿವಿ) ಈಗಲೂ ಇಂತಹುದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ತಮ್ಮ ಮುಂದಿನ ಚಿತ್ರದ ನಟಿ ಅರಿಯಾನಾ ಗ್ಲೋರಿ ಜತೆಗೆ ತಮ್ಮದೇ ಕಚೇರಿಯಲ್ಲಿ ನಡೆದ‌ ಒನ್ ಟು ಒನ್ ಸಂದರ್ಶನದಲ್ಲಿ ಬೋಲ್ಡ್ ಆಗಿ ಮಾತನಾಡಿದ್ದು, ಸುಮಾರು ಅರ್ಧ ಗಂಟೆಯ‌‌ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಇಬ್ಬರೂ ಜಿಮ್ ಮಾಡುತ್ತಲೇ ಬಿಂದಾಸ್ ಆಗಿ ಬೋಲ್ಡ್ ಮಾತುಗಳನ್ನಾಡಿರುವ ತೆಲುಗು ಸಂದರ್ಶನದ ವಿಡಿಯೋ ಯೂ ಟ್ಯೂಬ್ ನಲ್ಲಿ ವೈರಲ್ ಆಗಿದೆ. ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್, ಸಲಿಂಗ ಕಾಮ, ರೊಮ್ಯಾನ್ಸ್, ಅಫೇರ್ ಬಗ್ಗೆಯೇ ಹೆಚ್ಚು‌‌ ಮಾತನಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮತ್ತಿತರ ವಿಚಾರಗಳ‌‌ ಬಗ್ಗೆ ನಡೆಯುತ್ತಿದ್ದ ಮಾತುಕತೆ ಬಳಿಕ ವೈಯಕ್ತಿಕ ವಿಚಾರ ಹಾಗೂ ಅಂಗಾಂಗಗಳತ್ತ ಹೊರಳಿದೆ.
ನೀವು ಸಲಿಂಗಕಾಮಿ. ಲೈಂಗಿಕತೆಯನ್ನು ಇಷ್ಟಪಡುತ್ತೀರಾ ಎಂದು ಅರಿಯಾನಾ ಪ್ರಶ್ನಿಸದ್ದು, ಹೌದು. ನನಗೆ ಸಲಿಂಗಕಾಮ ನೋಡುವುದು ಇಷ್ಟ ಎಂದು ವರ್ಮ ಹೇಳಿದ್ದಾರೆ. ಸುಂದರ ಮಹಿಳೆಯರನ್ನು ನೋಡಲು ಇಷ್ಟಪಡುತ್ತೇನೆ ಎಂದೂ ಹೇಳಿದ್ದಾರೆ.

ಅಪ್ಸರಾ ಜತೆ ಅಫೇರ್ ಇದ್ಯಾ…?
ಈ ಹಿಂದಿನ ಚಿತ್ರದ ನಾಯಕಿ ಅಪ್ಸರಾ ರಾಣಿ ಜತೆ ನಿಮಗೆ ಅಫೇರ್ ಇದೆಯಾ ಎಂದು ಅರಿಯಾನಾ ಪ್ರಶ್ನಿಸಿದರು. ಈ ಪ್ರಶ್ನೆಯಿಂದ ಆಶ್ಚರ್ಯಚಕಿತರಾದ ಆರ್‌ಜಿವಿ, ಅಪ್ಸರಾರೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ಎಲ್ಲ ಸುಂದರ ಮಹಿಳೆಯರನ್ನು ಪ್ರೀತಿಸುತ್ತೇನೆ. ಲೈಂಗಿಕ ಸಂಪರ್ಕ ಹೊಂದಿದ ಮಹಿಳೆಯರನ್ನು ಮಾತ್ರ ಪ್ರೀತಿಸುತ್ತೇನೆ ಎಂದಿದ್ದಾರೆ.

ನಿಮ್ಮೊಂದಿಗೇ ಸೆಕ್ಸ್ ಮಾಡಿದ್ದೆ…

ಕೊನೆಯ ಬಾರಿ ಯಾರೊಂದಿಗಾದರೂ ಲೈಂಗಿಕ ಸಂಪರ್ಕ ಹೊಂದಿದ್ದೀರಾ ಎಂದು ಅರಿಯಾನಾ ಪ್ರಶ್ನಿಸಿದ್ದು, ಒಂದು ಗಂಟೆ ಮುಂಚೆ ನಿಮ್ಮೊಂದಿಗೇ ಲೈಂಗಿಕ ಸಂಪರ್ಕ‌ ಹೊಂದಿದ್ದೆ ಎಂದು ವರ್ಮಾ ಹೇಳಿದಾಗ ಅರಿಯಾನಾ‌ ಅಕ್ಷರಶಃ ಕಂಗಾಲಾಗಿದ್ದಾರೆ. ನಿಮ್ಮೊಂದಿಗೆ ಕೆಲಸ ಮಾಡುವಾಗ, ನನ್ನೊಳಗೆ ಕೆಲವು ಭಾವನೆಗಳು ಹುಟ್ಟಿಕೊಂಡಿವೆ ಮತ್ತು ನಾನು ನಿಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದೇನೆ ಎಂದು ವರ್ಮಾ ವಿವರಿಸಿದ್ದಾರೆ.

ನಾನು‌ ಮಾತಾಡಿದರೆ ನೆಟ್ಟಿಗರು ದೊಡ್ಡದು‌ ಮಾಡ್ತಾರೆ…
ಬಳಿಕ ಅರಿಯಾನಾ ಅವರಿಗೆ ವರ್ಮಾ, ನಿಮ್ಮ ಗೆಳೆಯ ಇಷ್ಟಪಡುವ ನಿಮ್ಮ ದೇಹದ ಉತ್ತಮ ಭಾಗ ಯಾವುದು ಎಂದಾಗ, ನನಗೆ ಗೊತ್ತಿಲ್ಲ ಸರ್. ನನಗೆ ಗೆಳೆಯ ಇಲ್ಲ ಮತ್ತು ನಾನು ಉತ್ತರವನ್ನು ಹೇಳಿದರೆ ನೆಟ್ಟಿಗರು ಅದನ್ನು ದೊಡ್ಡದು ಮಾಡುತ್ತಾರೆ ಎಂದು ಅರಿಯಾನಾ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ … ಇಷ್ಟ…
ನಾನು ಇಷ್ಟಪಡುವ ನಿಮ್ಮ ದೇಹದ ಅತ್ಯುತ್ತಮ ಭಾಗ ಯಾವುದು ಎಂದು ನೀವು ಭಾವಿಸುತ್ತೀರಿ ಎಂದು‌ ವರ್ಮಾ ಅರಿಯಾನಾ ಅವರನ್ನು ಪ್ರಶ್ನಿಸಿದಾಗ, ಮೊದಲ ಸಂದರ್ಶನದಲ್ಲಿ ನೀವು ನನ್ನ ತೊಡೆಗಳನ್ನು ಇಷ್ಟಪಟ್ಟಿದ್ದಿರಿ. ಈಗಲೂ ಅದನ್ನೇ ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ‌ ಎಂದಿದ್ದಾರೆ.
ಆದರೆ ವರ್ಮಾ ತಕ್ಷಣ ಪ್ರತಿಕ್ರಿಯಿಸಿ, ನನ್ನ ಆದ್ಯತೆಗಳು ಕಾಲಕಾಲಕ್ಕೆ ಬದಲಾಗುತ್ತವೆ. ಈಗ ನಾನು ನಿಮ್ಮ ನಿತಂಬವನ್ನು ಇಷ್ಟಪಡುತ್ತೇನೆ ಎಂದಾಗ ಅರಿಯಾನ ತುಸು ಮುಜುಗರಕ್ಕೊಳಗಾದಂತೆ ಕಂಡುಬಂತು.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!