newsics.com
ಬೆಂಗಳೂರು: ನಟಿ ರಮ್ಯಾ ಟ್ರಾಪಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವೇಳೆ ಕಣ್ಣಿಗೆ ಬಿದ್ದ ಬರಹವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ಎಲ್ಲರೂ ನನ್ನ ಸಹೋದರಿಯರು. ಆದರೆ ನೀನಲ್ಲ ಎಂದು ವಾಹನವೊಂದರಲ್ಲಿ ಬರೆಯಲಾಗಿತ್ತು.
ಆ ವಾಹನದ ಹಿಂದೆ ಇದ್ದ ರಮ್ಯಾ ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಚಿತ್ರ ವಿಚಿತ್ರ ಕಮೆಂಟ್ ಗಳು ಹರಿದು ಬಂದಿವೆ.
ಕೆಲವು ಹುಡುಗಿಯರು ಹುಡುಗರ ಹೆಸರನ್ನು ಸೇರಿಸಿ ಹೊಸ ಕಮೆಂಟ್ ಮಾಡಿದ್ದಾರೆ. ಎಲ್ಲರೂ ನನ್ನ ಸಹೋದರರು. ಆದರೆ ನೀನಲ್ಲ ಎಂಬ ಲೈನ್ ಸೇರಿಸಿದ್ದಾರೆ.