newsics.com
ಮುಂಬೈ: ಸಾಮಾಜಿಕ ಜಾಲ ತಾಣಗಳಲ್ಲಿ ಗಿಮಿಕ್ ಮಾಡಿ ಅಭಿಮಾನಿಗಳ ಬೆಂಬಲ ಗಿಟ್ಟಿಸಲು ಕಸರತ್ತು ನಡೆಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈ ಬಾರಿ ಭಾರೀ ತಡವಾಗಿ ದಸರಾ ಹಬ್ಬದ ಶುಭ ಕೋರಿದ್ದಾರೆ.
ಮೈಸೂರಿನಲ್ಲಿ ಜಂಬೂ ಸವಾರಿ ಮುಗಿದ ಬಳಿಕ ಅವರಿಗೆ ದಸರಾ ಹಬ್ಬದ ನೆನಪಾಗಿದೆ. ರಾತ್ರಿ 8.58ಕ್ಕೆ ಈ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ದಸರಾ ಹಬ್ಬದ ಶುಭ ಕೋರಿದ್ದಾರೆ. ದಸರಾ ಹಬ್ಬಕ್ಕೆ ಶುಭ ಕೋರಲು ತಡವಾಗಿದೆ ಎಂಬುದನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ.
ಲೇಟ್ ಆದರೂ ಲೇಟೆಸ್ಟ್ ಎಂಬ ಮನೋ ಭಾವನೆಯನ್ನು ರಶ್ಮಿಕಾ ಹೊಂದಿರುವಂತೆ ಭಾಸವಾಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲ ತಾಣ ನಿರ್ವಹಣೆ ಸಂಬಂಧ ಮುಂಬೈಯ ಸಂಸ್ಥೆಯೊಂದರ ಜತೆ ರಶ್ಮಿಕಾ ಮಾತುಕತೆ ಕೂಡ ನಡೆಸಿದ್ದರು.