Thursday, December 8, 2022

ನನ್ನ ತಂದೆ ವಯಸ್ಸಿನ ನಿರ್ಮಾಪಕ ನನ್ನನ್ನು ಮಂಚಕ್ಕೆ ಕರೆದಿದ್ದ ಎಂದ ನಟಿ!

Follow Us

newsics.com

ಮುಂಬೈ: ಖ್ಯಾತ ಕಿರುತೆರೆ ನಟಿ ರತನ್‌ ರಜಪೂತ್‌ ಕಾಸ್ಟಿಂಗ್ ಕೌಚ್ ಬಗೆಗಿನ ಕರಾಳ ಅನುಭವದ ಬಗ್ಗೆ ಮಾತನಾಡಿದ್ದಾರೆ.

ರತನ್ ತಮ್ಮ ವೃತ್ತಿ ಬದುಕಿನಲ್ಲಾದ ಕರಾಳ ಅನುಭವದ ಬಗ್ಗೆ ಇತ್ತೀಚಿಗೆ ಮಾಧ್ಯಮವೊಂದರಲ್ಲಿ ಮಾತಾನಾಡಿದ್ದಾರೆ. 4 ವರ್ಷದ ಹಿಂದೆ ನಾನು ಮುಂಬೈಗೆ ಹೋಗಿದ್ದೆ. ಅಲ್ಲಿ 60-65 ರ ವಯಸ್ಸಿನ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಆ ವೇಳೆ ಅವರು ನನ್ನನ್ನು ನೋಡಿ, ನಿನ್ನ ಕೂದಲು, ಚರ್ಮ ನೋಡು, ನೀನು ಹೇಗೆ ಕಾಣ್ತಾ ಇದ್ದೀಯಾ, ನಿನ್ನ ಸಂಪೂರ್ಣ ಲುಕ್ ಬದಲಾಗಬೇಕು. ಅದಕ್ಕಾಗಿ 2 ರಿಂದ 2.5 ಲಕ್ಷ ರೂ. ಖರ್ಚು ಆಗುತ್ತದೆ. ಅದಕ್ಕಾಗಿ ನಾನು ಹಣ ಖರ್ಚು ಮಾಡಬಲ್ಲೆ. ಆದರೆ ನೀನು ನನ್ನ ಸ್ನೇಹಿತೆ ಆಗಬೇಕು ಎಂದು ಹೇಳಿದ್ದರು.

ಇದನ್ನು ಕೇಳಿ ನಾನು ಆ ನಿರ್ಮಾಪಕರಿಗೆ “ನೀವು ನನಗೆ ತಂದೆ ಸಮಾನರು, ನಾನು ನಿಮ್ಮೊಂದಿಗೆ ಸ್ನೇಹಿತೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದೆ. ಇದನ್ನು ಕೇಳಿದ ಆ ನಿರ್ಮಾಪಕ ಸಿಟ್ಟಾಗಿ, ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಈ ರೀತಿ ಸ್ನೇಹಿತರಾಗಲು ಸಾಧ್ಯ. ಒಂದು ವೇಳೆ ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದಿದ್ದಾರೆ. ಆ ಕ್ಷಣವೇ ಅಲ್ಲಿಂದ ಹೊರ ಬಂದೆ. ಕೊನೆಯಲ್ಲಿ ರತನ್, ಈ ಘಟನೆ ಆದ ಬಳಿಕ ನಾನು ಮತ್ತೆಂದೂ ಸಿನಿಮಾ ಇಂಡಸ್ಟ್ರಿಗೆ ಹೋಗಿ ನಟಿಯಾಗುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.

108 ಆ್ಯಂಬುಲೆನ್ಸ್ ಸಹಾಯವಾಣಿ ಸಂಖ್ಯೆ ಪುನಾರಂಭ

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!