ಬೆಂಗಳೂರು: ಹಿರಿಯ ನಟ ರಮೇಶ್ ಅರವಿಂದ್ ಪತ್ತೇದಾರಿ ನಾಯಕನಾಗಿ ಕಾಣಿಸಿಕೊಂಡಿರುವ ‘ಶಿವಾಜಿ ಸುರತ್ಕಲ್’ ಚಿತ್ರ ಫೆ.21ರಂದು ತೆರೆ ಕಾಣಲಿದೆ.
ಮೊದಲ ಬಾರಿ ರಮೇಶ್ ಅರವಿಂದ್ ಪತ್ತೇದಾರಿ ನಾಯಕನಾಗಿ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ಆರೋಹಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಮೊದಲಾದವರು ತಾರಾಬಳಗದಲ್ಲಿದ್ದಾರೆ.
ಕೊಲೆಯ ರಹಸ್ಯ ಭೇದಿಸುವ ಪತ್ತೇದಾರಿ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ರಣಗಿರಿಯಲ್ಲಿ ನಡೆಯುವ ಅನುಮಾನಾಸ್ಪದ ಸಾವಿನ ಸುತ್ತ ಈ ಚಿತ್ರ ಮೂಡಿಬಂದಿದೆ.
‘ಶಿವಾಜಿ ಸುರತ್ಕಲ್’ಗೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾದ್ ಅವರ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ರಮೇಶ್ ಅರವಿಂದ್ ಪತ್ತೇದಾರಿ ಪಾತ್ರದ ‘ಶಿವಾಜಿ ಸುರತ್ಕಲ್’ 21ಕ್ಕೆ ಬಿಡುಗಡೆ
Follow Us