newsics.com
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಸದ್ಯ ಖರೀದಿ ಮಾಡುತ್ತಿರುವ ಆಡಿ ಕ್ಯೂ 7 ಎಸ್ಯುವಿಯನ್ನು ರಿಷಭ್ ಶೆಟ್ಟಿ ಖರೀದಿ ಮಾಡಿದ್ದಾರೆ.
ಪತ್ನಿ ಹಾಗೂ ಮಕ್ಕಳ ಸಮೇತ ತೆರಳಿ ಕಾರಿನ ಡೆಲಿವರಿ ಪಡೆದ ರಿಷಬ್ ಶೆಟ್ಟಿ ಶೋ ರೂಮ್ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕಾರು ಖರೀದಿಯ ಫೋಟೋಗಳನ್ನು ರಿಷಭ್ ಪತ್ನಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.