Wednesday, May 25, 2022

ಕಿರುತೆರೆಗೆ ಮರಳಿದ ರೂಪಿಕಾ ಈಗ ದೊರೆಸಾನಿಯ ದೀಪಿಕಾ

Follow Us

ಹಿರಿತೆರೆಯಿಂದ ಮತ್ತೆ ಕಿರುತೆರೆಗೆ ಮರಳಿರುವ ರೂಪಿಕಾ ‘ದೊರೆಸಾನಿ’ ಧಾರಾವಾಹಿಯಲ್ಲಿ ನಾನು ನಾಯಕಿ ದೀಪಿಕಾ ಆಗಿ ಅಭಿನಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.


• ಅನಿತಾ ಬನಾರಿ
newsics.com@gmail.com

ಲರ್ಸ್ ಕನ್ನಡ ವಾಹಿನಿಯಲ್ಲಿ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ದೊರೆಸಾನಿಯಲ್ಲಿ ನಾಯಕಿ ದೀಪಿಕಾ ಆಗಿ ನಟಿಸುತ್ತಿರುವ ಚೆಲುವೆಯ ಹೆಸರು ರೂಪಿಕಾ. ಕಿರುತೆರೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ರೂಪಿಕಾ ಹಿರಿತೆರೆಯಲ್ಲೂ ಕಮಾಲ್ ಮಾಡಿದ ಸುರಸುಂದರಿ.
ಬಾಲನಟಿಯಾಗಿ ಬಣ್ಣದ ಲೋಕ ಪ್ರವೇಶಿಸಿದ ರೂಪಿಕಾ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿ ಮಿಂಚಿದ ಪ್ರತಿಭೆ ಹೌದು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಡಿಯಲ್ಲಿ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೆಳ್ಳಿಚುಕ್ಕಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರೂಪಿಕಾ ಮುಂದೆ ಬದುಕು, ಅವಳ ಮನೆ ಧಾರಾವಾಹಿಗಳಲ್ಲಿ ಅಭಿನಯಿಸಿದರು.

ಚೆಲುವಿನ ಚಿಲಿಪಿಲಿ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದ ರೂಪಿಕಾ ಮೊದಲ ಸಿನಿಮಾದಲ್ಲಿಯೇ ನಾಯಕಿಯಾಗಿ ಕಮಾಲ್ ಮಾಡಿದರು. ಮುಂದೆ ಮಂಜರಿ, ರುದ್ರಾಕ್ಷಿಪುರ, ಥರ್ಡ್ ಕ್ಲಾಸ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ ಇತ್ತೀಚೆಗೆ ಡೈಮಂಡ್ ಕ್ರಾಸ್ ಸಿನಿಮಾದಲ್ಲಿ ನಟಿಸಿದ್ದು, ಅದಿನ್ನೂ ತೆರೆ ಕಾಣಬೇಕಿದೆ.
ಕನ್ನಡವಲ್ಲದೇ ಪರಭಾಷೆಯ ಸಿನಿರಂಗಕ್ಕೆ ಕಾಲಿಟ್ಟಿರುವ ರೂಪಿಕಾ ತಮಿಳಿನ ಚಿಲ್ ಬ್ರೋ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮತ್ತೆ ಕಿರುತೆರೆಗೆ ಮರಳಿರುವ ರೂಪಿಕಾ ‘ದೊರೆಸಾನಿ ಧಾರಾವಾಹಿಯಲ್ಲಿ ನಾನು ನಾಯಕಿ ದೀಪಿಕಾ ಆಗಿ ಅಭಿನಯಿಸುತ್ತಿದ್ದೇನೆ. ಎಲ್ಲರನ್ನೂ ಪ್ರೀತಿಸುವ ಹಾಗೂ ಗೌರವದಿಂದ ಕಾಣುವ ದೀಪಿಕಾಗೆ ತಂದೆ ಮೇಲೆ ಪ್ರೀತಿ ಹೆಚ್ಚು. ತಂದೆಯೇ ಪ್ರಪಂಚ. ವಿದ್ಯಾಭ್ಯಾಸ ಮುಗಿಸಿರುವ ದೀಪಿಕಾ ಕೆಲಸ ಹುಡುಕುತ್ತಿರುತ್ತಾಳೆ. ಈ ಸಮಯದಲ್ಲಿ ಆಕೆ ಪ್ರೀತಿಗೆ ಬೀಳುತ್ತಾಳೆ. ಮುಂದೇನಾಗುತ್ತದೆ ಎಂಬುದೇ ದೊರೆಸಾನಿಯ ಕಥಾಹಂದರ’ ಎಂದು ಧಾರಾವಾಹಿ ಪಾತ್ರದ ಬಗ್ಗೆ ವಿವರಿಸುತ್ತಾರೆ ರೂಪಿಕಾ.

ಮತ್ತಷ್ಟು ಸುದ್ದಿಗಳು

Latest News

ಕೊಡಗಿನಲ್ಲಿ ಇದ್ದಕಿದ್ದಂತೆ ಕಾಣಿಸಿಕೊಂಡ ಕೆಮ್ಮು, ಕಣ್ಣಿನ ಉರಿ ; ಹೆಚ್ಚಿದ ಆತಂಕ

newsics.com ಮಡಿಕೇರಿ: ಇದ್ದಕಿದ್ದಂತೆ ಒಮ್ಮೆಲೆ ಅನೇಕ ಮಂದಿಯಲ್ಲಿ ಕೆಮ್ಮು ಮತ್ತು ಕಣ್ಣಿನ ಉರಿ ಕಾಣಿಸಿಕೊಂಡಿದ್ದು, ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾಸ್ಕ್ ಧರಿಸುವಂತೆ...

ಏರಿಕೆ ಕಂಡ ಚಿನ್ನದ ಬೆಲೆ ; ಬೆಳ್ಳಿ ಬೆಲೆಯಲ್ಲಿ 500 ರೂ. ಇಳಿಕೆ

newsics.com ದೆಹಲಿ: ದೇಶದಲ್ಲಿ 2 ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಇಂದು ಚಿನ್ನದ ಬೆಲೆ 10 ಗ್ರಾಂ.ಗೆ 660 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯು ಒಂದೇ ದಿನದಲ್ಲಿ 500 ರೂ. ಇಳಿಕೆಯಾಗಿದೆ. ನಿನ್ನೆ ದೇಶದಲ್ಲಿ...

ಜಮ್ಮು & ಕಾಶ್ಮೀರದಲ್ಲಿ ಪೊಲೀಸರ ಮೇಲೆ ಭಯೋತ್ಪಾದಕರಿಂದ ಗ್ರೆನೇಡ್​ ದಾಳಿ

newsics.com ಜಮ್ಮು & ಕಾಶ್ಮೀರದ ಕುಲ್ಗಾಮ್​ನ ಯರಿಪೋರಾ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್​ಪಿಎಫ್​ನ ನಾಕಾ ಪಾರ್ಟಿಯ ಮೇಲೆ ಭಯೋತ್ಪಾದಕರು ಗ್ರೆನೇಡ್​ಗಳನ್ನು ಎಸೆದ ಪರಿಣಾಮ ಮೂವರು ನಾಗರಿಕರು ಗಾಯಗೊಂಡ ಘಟನೆಯು ಮಂಗಳವಾರ ನಡೆದಿದೆ. ಪೊಲೀಸರತ್ತ ಭಯೋತ್ಪಾದಕರು ಎಸೆದ...
- Advertisement -
error: Content is protected !!