newsics.com
ಮುಂಬೈ: ಸಂಗೀತ ದಿಗ್ಗಜ, ಗಾನ ಗಂಧರ್ವ ಎಸ್ಪಿಬಿ ಹಾಡಿಗೆ ಮನಸೋಲದವರೇ ಇಲ್ಲ.ಅದೇಷ್ಟೋ ನಟರು ಸೂಪರ್ ಸ್ಟಾರ್ಗಳಾಗಿದ್ದ ಹಿಂದಿರೋದು ಎಸ್ಪಿಬಿ ಸುಮಧುರ ಕಂಠ. ಇಂತಹುದೇ ಕ್ಷಣವೊಂದನ್ನು ನೆನೆಸಿಕೊಂಡಿರೋ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಸ್ಪಿಬಿಯವರಿಗಾಗಿ ಭಾವುಕರಾಗಿ ಟ್ವೀಟ್ ಮಾಡಿದ್ದು,ನೀವು ನನಗಾಗಿ ಹಾಡಿದ ಪ್ರತಿಯೊಂದು ಹಾಡಿಗೂ ಥ್ಯಾಂಕ್ಸ್ ಎನ್ನುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಸಲ್ಮಾನ್ ಖಾನ್, ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹೃದಯದಿಂದ ಪ್ರಾರ್ಥಿಸುತ್ತೇನೆ. ನೀವು ನನಗಾಗಿ ಹಾಡಿದ ಎಲ್ಲ ಪ್ರತಿಯೊಂದು ಹಾಡಿಗಾಗಿಯೂ ನಾನು ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲೂ ವಿಶೇಷವಾಗಿ ದಿಲ್ ದಿವಾನ್ ಹಿರೋ ಪ್ರೇಮ್ಗಾಗಿ ಹಾಡಿದ ಹಾಡಿಗಾಗಿಯೂ ನಾನು ಚಿರ ಋಣಿ. ಲವ್ ಯು ಸರ್ ಎಂದು ಹಾಕಿದ್ದಾರೆ. ‘
ಎಸ್ಪಿಬಿ ಆರೋಗ್ಯ ಕ್ಷೀಣಿಸುತ್ತಿದೆ ಎಂಬ ಹೆಲ್ತ್ ಬುಲೇಟಿನ್ ಬಳಿಕ ಸಲ್ಮಾನ್ ಟ್ವೀಟ್ ಮಾಡಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಸಲ್ಮಾನ್ ಖಾನ್ ರ ಹಲವು ಚಿತ್ರಗಳಿಗಾಗಿ ಎಸ್ಪಿಬಿ ಹಾಡಿದ್ದು, ಹಮ್ ಆಪ್ ಕೆ ಹೈಕೌನ್, ಮೈ ನೇ ಪ್ಯಾರ್ ಕಿಯಾ ಗೆಲುವಿನಲ್ಲಿ ಎಸ್ಪಿಬಿ ಧ್ವನಿಯ ಮೋಡಿಯೂ ಇದೆ.
ನೀವು ನನಗಾಗಿ ಹಾಡಿದ ಪ್ರತಿ ಹಾಡಿಗೂ ಥ್ಯಾಂಕ್ಸ್…
Follow Us