ಹೈದರಾಬಾದ್: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬರೇ ನಾಲ್ಕು ತಿಂಗಳಲ್ಲಿ 26 ಕಿಲೋ ತೂಕ ಕಡಿಮೆ ಮಾಡಿದ್ದಾರೆ. ಈ ಸಂಬಂಧ ಮೊದಲಿನ ಹಾಗೂ ಇತ್ತೀಚೆಗಿನ ಪೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಸಂತಸವನ್ನು ಕೂಡ ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ. ಇದೀಗ ಅತ್ಯುನ್ನತ ಮಟ್ಟದಲ್ಲಿ ಹೋರಾಟ ನಡೆಸಲು ನಾನು ಕ್ಷಮತೆ ಹೊಂದಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಯಾರೂ ಎನೇ ಹೇಳಿದರೂ ಕೂಡ ನಿಮ್ಮ ಕನಸನ್ನು ನೀವು ಬೆಂಬತ್ತಿ ಎಂದು ಸಾನಿಯಾ ಕಿವಿಮಾತು ಹೇಳಿದ್ದಾರೆ.