newsics.com
ಬೆಂಗಳೂರು: ಎಲ್ಲರ ಮನೆ ಮಾತಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೊಮ್ಮೆ ಆರಂಭಗೊಳ್ಳುವ ಸೂಚನೆ ಸಿಕ್ಕಿದೆ. ಆದರೆ ಈ ಬಾರಿ ನೆಟ್ಟಿಗರಿಗೆ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿರುವುದು ವಿಶೇಷವಾಗಿದೆ.
ಚಂದನವನದ ನಟ ರಮೇಶ್ ಸಾರಥ್ಯದಲ್ಲಿ ಇದೀಗ ಮತ್ತೊಮ್ಮೆ ವೀಕೆಂಡ್ ವಿತ್ ರಮೇಶ್ ಪ್ರಾರಂಭವಾಲಿದೆ. ಈ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ವೈಯಕ್ತಿಕವಾಗಿ ನನಗೆ ಫೇವರಿಟ್ ಎನಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭಗೊಂಡು ಎಂಟು ವರ್ಷಗಳೇ ಕಳೆದಿವೆ. ಕಿರುತೆರೆಯಲ್ಲಿ ಇನ್ನೊಂದು ಸೀಸನ್ ಆರಂಭಿಸಬಹುದೇ..? ಸಾಧಕರ ಸೀಟ್ನಲ್ಲಿ ಕುಳಿತುಕೊಳ್ಳಲು ಯಾರು ಅರ್ಹರು..? ದಯವಿಟ್ಟು ತಿಳಿಸಿ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರಿಗೆ ಈ ಬಾರಿಯ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದೇ ತಡ ಅನೇಕರ ಹೆಸರನ್ನು ಕಮೆಂಟ್ ಬಾಕ್ಸಿನಲ್ಲಿ ಬರೆಯಲಾಗಿದೆ. ಗವಿ ಮಠದ ಸ್ವಾಮೀಜಿಗಳು, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಎಸ್.ಎಲ್. ಭೈರಪ್ಪ, ಯಡಿಯೂರಪ್ಪ, ತಾರಾ, ಹಂಸಲೇಖ, ಸುಧಾರಾಣಿ ಹೀಗೆ ನೆಟ್ಟಿಗರ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇದೆ.