newsics.com
ಮುಂಬೈ: ಧಾರಾವಾಹಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ನಿಧಿ ಪರ್ಮಾರ್ ತಮ್ಮ ವೈಯಕ್ತಿಕ ಬದುಕಿನ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಗು ಬೇಕು ಎಂಬ ಬಯಕೆ ನನಗಿತ್ತು. ಜತೆಗೆ ವೃತ್ತಿ ಜೀವನದ ಒತ್ತಡ ಕೂಡ ಇತ್ತು.
ಈ ಹಿನ್ನೆಲೆಯಲ್ಲಿ 37ನೇ ವಯಸ್ಸಿನಲ್ಲಿ ಅಂಡಾಣುವನ್ನು ಸಂರಕ್ಷಿಸಿ ಇಟ್ಟಿದ್ದೆ. 40ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ನಿಧಿ ತಿಳಿಸಿದ್ದಾರೆ.
ಲಾಕ್’ಡೌನ್ ಡೌನ್ ಅವಧಿಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಎದೆ ಹಾಲನ್ನು ನೀಡಿದ್ದೇನೆ ಎಂದು ನಿಧಿ ಪರ್ಮಾರ್ ಬಹಿರಂಗಪಡಿಸಿದ್ದಾರೆ.