newsics.com
ಮುಂಬೈ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಬಂಧಿಸಿದ್ದು, ಸದ್ಯಕ್ಕೆ ಆರ್ಯನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ.
ಆರ್ಯನ್ ಖಾನ್ ತನ್ನ ತಂದೆ ಶಾರುಖ್ ಖಾನ್ ಮತ್ತು ತಾಯಿ ಗೌರಿ ಖಾನ್ ಜೊತೆ ಜೈಲಿನ ಆವರಣದಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ. ಖೈದಿಗಳು ವಾರದಲ್ಲಿ ಎರಡು ಬಾರಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅವಕಾಶವಿದೆ.
ಜೊತೆಗೆ ಆರ್ಯನ್ ಖಾನ್ ಖರ್ಚುಗಳಿಗಾಗಿ ತಂದೆ ಶಾರುಖ್ ಖಾನ್ 4,500 ರೂಪಾಯಿಗಳನ್ನು ಮನಿ ಆರ್ಡರ್ ಮೂಲಕ ಕಳುಹಿಸಿದ್ದಾರೆ. ಜೈಲಿನ ನಿಯಮ ಪ್ರಕಾರ ಖೈದಿಗೆ ತಿಂಗಳಿಗೆ 4,500ಯ ಒಂದು ಮನಿ ಆರ್ಡರ್ ಕಳಿಸಬಹುದು.