ಮಾನವ ಕಂಪ್ಯೂಟರ್ ಎಂದೇ ಕರೆಸಿಕೊಂಡ ಗಣಿತಜ್ಞೆ ಶಕುಂತಲಾ ದೇವಿ ಜೀವನ ಆಧರಿಸಿದ ಸಿನಿಮಾ ಟ್ರೇಲರ್ ಬುಧವಾರ (ಜು.15) ಅಮೇಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.
ಸೋನಿ ಪಿಕ್ಚರ್ಸ್ ಹಾಗೂ ವಿಕ್ರಂ ಮಲ್ಹೋತ್ರಾ ನಿರ್ಮಿಸಿರುವ ಈ ಚಿತ್ರ ಜುಲೈ 31ರಂದು ಬಿಡುಗಡೆಯಾಗಲಿದೆ. ಶಕುಂತಲಾ ದೇವಿ ಪಾತ್ರದಲ್ಲಿ ಹಾಟ್ ಮತ್ತು ಗ್ಲಾಮರಸ್ ಪಾತ್ರಗಳ ಮೂಲಕವೇ ಹೆಸರಾದ ವಿದ್ಯಾ ಬಾಲನ್ ನಟಿಸಿದ್ದರೆ, ಪ್ರಕಾಶ ಬೆಳವಾಡಿ, ಸಾನ್ಯಾ ಮಲ್ಹೋತ್ರಾ, ಅಮಿತ್ ಸಧಾ, ಜೆಶು ಸೇನ್ ಗುಪ್ತಾ ಬಣ್ಣ ಹಚ್ಚಿದ್ದಾರೆ.
ಟ್ರೇಲರ್’ನ ತುಂಬಾ ಜೀವಂತಿಕೆ ತುಂಬಿದ್ದು ಗಣಿತ ಮಾತ್ರವಲ್ಲದೆ ಪ್ರೀತಿ, ಪ್ರೇಮ, ಸಂಭ್ರಮ, ಹಾಸ್ಯ ಎಲ್ಲವನ್ನೂ ಸವಿಯುವ ಅವಕಾಶ ಕಲ್ಪಿಸಿದೆ.
ಟ್ರೇಲರ್ ಶಕುಂತಲಾ ಅವರ ಜೀವನ ಚರಿತ್ರೆಯಂತೆ ಚಿತ್ರಿತಗೊಳ್ಳದೆ ಮಸಾಲೆ ಅಂಶವನ್ನೂ ತುಂಬಿಕೊಂಡಿದೆ.
ಅನುಮೆನನ್ ನಿರ್ದೇಶನದ ಈ ಚಿತ್ರ ಹಲವು ಕಾರಣಕ್ಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಮರಿಯಾನೆಗೆ ಮಾವುತನೇ ತಾಯ್ತಂದೆ!