ಚೆನ್ನೈ: ನಟ ಕಮಲ ಹಾಸನ್ ಮತ್ತು ಸಾರಿಕ ಅವರ ಮುದ್ದಿನ ಮಗಳು ಶ್ರುತಿ ಹಾಸನ್ ಬೆಳ್ಳಿಪರದೆಯಲ್ಲಿ ಹೆಜ್ಜೆ ಇರಿಸಿ 11 ವರ್ಷ ಪೂರ್ಣಗೊಂಡಿದೆ. ಆರಕ್ಕೇರದ ಮೂರಕ್ಕೆ ಇಳಿಯದ ನಟಿಯಾಗಿ ಶ್ರುತಿ ಹಾಸನ್ ಗುರುತಿಸಿಕೊಂಡಿದ್ದಾರೆ. ಶ್ರುತಿ ಉತ್ತಮ ಗಾಯಕಿ ಕೂಡ ಆಗಿದ್ದಾರೆ.
ಮನೆಯಲ್ಲಿನ ಪರಿಸರ ಅವರನ್ನು ಚಿಕ್ಕಂದಿನಲ್ಲಿಯೇ ಬೆಳ್ಳಿಪರದೆಯತ್ತ ಆಕರ್ಷಿಸಿತ್ತು. ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶ್ರುತಿ, ಕೊರೋನಾ ಕಾರಣದಿಂದಾಗಿ ಮನೆಯಲ್ಲಿಯೇ ಕಾಳ ಕಳೆಯುತ್ತಿದ್ದಾರೆ.
ಚಿತ್ರರಂಗದ ಗಣ್ಯರು ಶ್ರುತಿ ಹಾಸನ್ ಅವರ ಸಿನಿ ಜರ್ನಿಗೆ ಶುಭ ಕೋರಿದ್ದಾರೆ