ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ ತಿಂಗಳಲ್ಲಿ ಎರಡು ಬಾರಿ ಬ್ರಿಟೀಷ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುವಾಗ ತಮ್ಮ ಲಗೇಜನ್ನು ಕಳೆದುಕೊಂಡಿದ್ದಾರಂತೆ.
ಈ ಕುರಿತು ಟ್ವೀಟ್ ಮಾಡಿರುವ ಸೋನಂ, “ನಾನು ಮೂರು ಬಾರಿ ಬ್ರಿಟೀಷ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸಿದ್ದು, ಎರಡು ಬಾರಿ ಲಗೇಜ್ ಕಳೆದುಕೊಂಡಿದ್ದೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬ್ರಿಟೀಷ್ ಏರ್ ಲೈನ್ಸ್ ಕ್ಷಮೆಯಾಚಿಸಿದ್ದು, ಲಗೇಜನ್ನು ಮರಳಿ ತಲುಪಿಸುವ ಭರವಸೆ ನೀಡಿದೆ. ಸೋನಂ ಕಪೂರ್ ಟ್ವೀಟ್ ಗೆ ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.