newsics.com
ಬೆಂಗಳೂರು: ಕೋಟಿಗೊಬ್ಬ- 3 ಸಿನಿಮಾ ಬಿಡುಗಡೆ ವಿಳಂಬವಾಗಿದ್ದಕ್ಕೆ ಕಿಚ್ಚ ಸುದೀಪ್ ಅಸಮಾಧಾನಗೊಂಡಿರುವ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಸಿನಿಮಾ ಬಿಡುಗಡೆಗಾಗಿ ತಂಡ ಸಾಕಷ್ಟು ಶ್ರಮವಹಿಸಿದೆ. ಯಾರಿಂದ ಈ ಸಮಸ್ಯೆ ಆಯಿತು ಎಂಬುವುದು ನನಗೆ ಚೆನ್ನಾಗಿ ಗೊತ್ತಿದೆ. ನಾಳೆ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಸುದೀಪ್ ಹೇಳಿದ್ದಾರೆ.
https://twitter.com/i/status/1448559929153888262
ಯಾವುದೇ ಅಭಿಮಾನಿಗಳು ಆವೇಶಕ್ಕೆ ಒಳಗಾಗಬಾರದು. ಚಿತ್ರಮಂದಿರಗಳನ್ನು ಹಾನಿ ಮಾಡಬಾರದು. ಚಿತ್ರಮಂದಿರಗಳ ಮಾಲೀಕರದ್ದು ತಪ್ಪಿಲ್ಲ. ಕ್ಷಮೆ ಇರಲಿ ಎಂದು ಕಿಚ್ಚ ಹೇಳಿದ್ದಾರೆ.
ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂದ ಎನ್ಸಿಬಿ