newsics.com
ಮುಂಬೈ: ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ ಪ್ರಚಾರದಲ್ಲಿರುವ ಯಾವುದೇ ಅವಕಾಶ ಬಿಡುವುದಿಲ್ಲ. ಈಗ ಮತ್ತೆ ಸುಹಾನಾ ಸುದ್ದಿಯಲ್ಲಿದ್ದಾರೆ.
ಸುಹಾನಾ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಆ ಸಮಯದ ಫೋಟೋಗಳನ್ನು ಬುಧವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಅಬರಿ ಸುಹಾನ ತಾಯಿಯ ಹಳೆ ಡ್ರೆಸ್‌ವೊಂದನ್ನು ಧರಿಸಿ ಗಮನ ಸೆಳೆದಿದ್ದಾರೆ.
ಪಾರ್ಟಿಯಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಅವರು ಗಾಢ ಬಣ್ಣದ ಪ್ರಿಂಟೆಡ್ ಡಿಸೈನರ್ ಟಾಪ್ ಧರಿಸಿದ್ದರು. ಆಕೆಯ ಪೋಸ್ಟ್ ನೋಡಿದ ತಕ್ಷಣ ಸುಹಾನಾ ಧರಿಸರುವ ಡ್ರೆಸ್ ಹೊಸದಲ್ಲ ಎಂದು ಗಮನಿಸಿದರು. ಗೌರಿ ಮತ್ತು ಸುಹಾನಾ ಅವರ ಅಕ್ಕಪಕ್ಕದಲ್ಲಿರುವ ಫೋಟೋಗಳ ಕೋಲಾಜ್ ಸಹ ಹಂಚಿಕೊಂಡು, ಸಾಮಾನ್ಯ ಜನರಂತೆ, ಸೆಲೆಬ್ರಿಟಿಗಳು ಕೂಡ ತಮ್ಮ ಬಟ್ಟೆಗಳನ್ನು ಇಷ್ಟು ಸಮಯದವರೆಗೆ ಇಟ್ಟುಕೊಳ್ಳುತ್ತಾರೆ ಎಂದು ಇತರರು ಆಶ್ಚರ್ಯಪಟ್ಟರು.