Tuesday, April 13, 2021

ಚಿತ್ರ ನಿರ್ದೇಶನಕ್ಕಿಳಿದ ನಟಿ ಮಂಡ್ಯದ ಬೆಡಗಿ ಸುಮಿತ್ರಾ ಗೌಡ

ಬೆಂಗಳೂರು: ಜಿಷ್ಣು ಚಿತ್ರದ ಮೂಲಕ ನಾಯಕ ನಟಿಯಾಗಿ ಹಾಗೂ ಚಿತ್ರದ ಸಹ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಮುಂಬೈ ಬೆಡಗಿ ಸುಮಿತ್ರಾ ಗೌಡ ಕನ್ನಡಿಗರಿಗೆ ಇನ್ನೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಕಥೆ ಚಿತ್ರಕತೆ ಸಂಭಾಷಣೆ ಮುಗಿದಿದೆ. ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಇದೆ.
ಮಾಧ್ಯಮದವರ ಜತೆ ಮಾತನಾಡಿದ ಸುಮಿತ್ರಾ ಗೌಡ, ಇದೊಂದು ಸ್ಲಂ ಏರಿಯಾ ದ ಬಡ ಹುಡುಗಿಯೊಬ್ಬಳು ಸಮಾಜವೇ ನೋಡುವಂತೆ ಬೆಳೆಯುವ ಕತೆಯಾಗಿದೆ. ಸ್ಪೋರ್ಟ್ಸ್ ರಿಲೇಟೆಡ್ ಕತೆಯಾಗಿದೆ. ಸೆಂಟಿಮೆಂಟ್ ಎಮೋಷನ್ಸ್ ಹಾಗೂ ಮಹಿಳಾ ಪ್ರಧಾನ ಚಿತ್ರ. ಅದರಿಂದ ತುಂಬಾ ಜಾಸ್ತಿನೇ ವರ್ಕೌಟ್ ಮಾಡಲಿದ್ದೇನೆ. ಈ ಚಿತ್ರದಲ್ಲಿ ನಿರ್ದೇಶನದ ಜತೆ ನಾಯಕಿಯಾಗಿ ಅಭಿನಯಿಸಿರುವ ನಾನು ಮಂಡ್ಯದ ಹುಡುಗಿ. ಬೆಳೆದದ್ದು, ವಿದ್ಯಾಭ್ಯಾಸ ಮುಂಬೈನಲ್ಲಾದರೂ ಕನ್ನಡದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂದಿದ್ದಾರೆ.
ಸುಮಿ ಗೌಡ ಹೆಸರಿನಲ್ಲಿ ಫೇಸ್ಬುಕ್ ಪೇಜ್ ನಲ್ಲಿ ನಾನು ಸದಾ ಲಭ್ಯವಿದ್ದು ಅಭಿಮಾನಿಗಳು ನೇರವಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ನಟ ಅನಂತನಾಗ್ ಜತೆ ಅಭಿನಯಿಸುವ ಅವಕಾಶಕ್ಕೆ ಎದುರು ನೋಡುತ್ತಿದ್ದೇನೆ ಎಂದು ಸುಮಿತ್ರಾ ಗೌಡ ಹೇಳಿದ್ದಾರೆ.

 

Sumithra Gowda

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!