newsics.com
ಕನ್ನಡ ಚಿತ್ರರಂಗದ ಪಾಲಿಗೆ ನಟಿ ಸನ್ನಿ ಲಿಯೋನ್ ಹೊಸ ಮುಖವೇನಲ್ಲ. ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನಟಿ ಸನ್ನಿ ಲಿಯೋನ್ ಕನ್ನಡ ಚಿತ್ರರಂಗದ ಜೊತೆಯಲ್ಲಿ ನಂಟು ಬೆಸೆದುಕೊಂಡಿದ್ದಾರೆ.
ಇದೀಗ ಚಾಂಪಿಯನ್ ಸಿನಿಮಾದ ಡಿಂಗರಬಿಲ್ಲಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ .
ಆ್ಯಂಕರ್ ಅನುಶ್ರೀ ನಡೆಸುವ ಯುಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಭಾಗಿಯಾಗಿರುವ ಸನ್ನಿ ಲಿಯೋನ್ ನಟ ಯಶ್ ಹಾಗೂ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಎಂದರೆ ನನಗೆ ತುಂಬಾನೇ ಇಷ್ಟ .ಅವರು ಒಳ್ಳೆಯ ಮನುಷ್ಯ. ರಾಕಿ ಬಾಯ್ ನನ್ನ ಹುಡುಗ ಅಲ್ಲ ಎಂದು ಹೇಳಿ ಸನ್ನಿ ಲಿಯೋನ್ ಮುದ್ದು ಮುದ್ದಾಗಿ ನಕ್ಕಿದ್ದಾರೆ. ಈ ಪ್ರೋಮೋ ಇದೀಗ ವೈರಲ್ ಆಗಿದೆ.