ಮುಂಬೈ: ನಟ ಅಜಯ್ ದೇವಗನ್ ನಟಿಸಿರುವ ತಾನಾಜಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸಂಗ್ರಹದತ್ತ ಹೆಜ್ಜೆ ಇಟ್ಟಿದೆ. ಜನವರಿ 10ರಂದು ಬಿಡುಗಡೆಯಾದ ತಾನಾಜಿ ಇದುವರೆಗೆ 128 ಕೋಟಿ ರೂಪಾಯಿ ಗಳಿಸಿದೆ. ಸದ್ಯದಲ್ಲೇ ಇದು 200 ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. 2020ರಲ್ಲಿ 100 ಕೋಟಿ ರೂಪಾಯಿ ಕ್ಲಬ್ ಪ್ರವೇಶಿಸಿದ ಮೊದಲ ಚಿತ್ರ ಇದಾಗಿದೆ. ಈ ಮಧ್ಯೆ ಜೆ ಎನ್ ಯು ವಿಶ್ವ ವಿದ್ಯಾನಿಲಯಕ್ಕೆ ಭೇಟಿ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ದೀಪಿಕಾ ಪಡುಕೋಣೆ ಅಭಿನಯದ ಛಪಕ್ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ನಿರೀಕ್ಷಿತ ಆದಾಯವಿಲ್ಲದೆ ಸೊರಗಿದೆ.