newsics.com
ಬೆಂಗಳೂರು: ಹೊಸ ದಾಖಲೆಗಳನ್ನೇ ಬರೆದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ಮಾಡದಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.
ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಕೆಜಿಎಫ್-2 ಚಿತ್ರದಲ್ಲಿ ಧೂಮಪಾನ ವಿಜೃಂಭಿಸಲಾಗಿದೆ. ಚಿತ್ರದಲ್ಲಿ ಸಮಾಜಕ್ಕೆ ಪೂರಕವಾದ ಯಾವುದೇ ಅಂಶಗಳಿಲ್ಲ. ಸಮಾಜದ ಕಳಕಳಿಯನ್ನು ಚಿತ್ರೀಕರಿಸಿಲ್ಲ. ಚಿತ್ರ ಬಿಡುಗಡೆಯಾದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ಈಗಾಗಲೇ ಕೆಜಿಎಪ್ 2 ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಇದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ವಿಶ್ವಮಟ್ಟದಲ್ಲಿ 1200 ಕೋಟಿ ರು. ಕ್ಲಬ್ ಸೇರಿದೆ. ಈ ಸಾಧನೆ ಮಾಡಿರುವ ಮೂರನೇ ಭಾರತೀಯ in CV ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿ 33 ದಿನಗಳಾಗಿವೆ. ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರ 2100 ಕೋಟಿ ರು. ಗಳಿಕೆ ಮಾಡಿದರೆ, ಬಾಹುಬಲಿ 2 ಸಿನಿಮಾ 1,810 ಕೋಟಿ ರೂ ಗಳಿಸಿದೆ.
ಭಾರತದಲ್ಲಿ 1000 ಕೋಟಿ ಉತ್ತಮ ಗಳಿಕೆ ದಾಖಲಿಸಿದ ಎರಡನೇ ಸಿನಿಮಾ ಎಂಬ ಕೀರ್ತಿ ಕೆಜಿಎಫ್ 2ಗೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 ಇದೆ.
ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು