Tuesday, April 13, 2021

ನಿಲ್ಲು ನಿಲ್ಲೆಲೇ ಪತಂಗ, ಅದೆಷ್ಟು ದೊಡ್ಡದೇ ನಿನ್ನಂಗ…!

    ಉಡುಪಿಯಲ್ಲಿ ಸಿಕ್ತು ಪ್ರಪಂಚದ ಅತಿ ದೊಡ್ಡ ಪತಂಗ!    

 ಇದು  ಅಂತಿಂಥ ಪತಂಗವಲ್ಲ. ಇದರ ರೆಕ್ಕೆಯ ವಿಸ್ತೀರ್ಣವೇ 24 ಸೆಂಟಿಮೀಟರ್!
ಇಂತಹದೊಂದು ಅಪರೂಪದ, ಭಾರೀ ಗಾತ್ರದ ಪತಂಗ ಎನ್ನಲಾದ ‘ಅಟ್ಲಾಸ್ ಮೋತ್’ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನದಲ್ಲಿ ಸೋಮವಾರ ಉರಗ ತಜ್ಞ ಉಡುಪಿಯ ಗುರುರಾಜ್ ಸನಿಲ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗವಾದ ಬಳಿಕ ಏನನ್ನೂ ತಿನ್ನುವುದಿಲ್ಲ. ಆದರೆ, ಜೀವಮಾನ ಪೂರ್ತಿ ಅಗತ್ಯವಾದ ಎಲ್ಲ ಎನರ್ಜಿಯನ್ನು ಹುಳುವಾಗಿರುವಾಗಲೇ ಎಲೆಗಳನ್ನು ತಿನ್ನುವ ಮೂಲಕ ಶೇಖರಿಸಿಟ್ಟುಕೊಳ್ಳುತ್ತದೆ. ಹೀಗೆ ಶೇಖರಿಸಿಟ್ಟುಕೊಂಡ ಎನರ್ಜಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಬದುಕಿನ ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ಹೀಗಾಗಿ ಹಾರಾಟದ ಸಮಯ ತೀರಾ ಕಡಿಮೆ. ಹೆಚ್ಚು ಕಾಲ ಬದುಕಬೇಕೆಂಬ ಆಸೆಯಿಂದ ಇಷ್ಟೆಲ್ಲಾ ವಿಶ್ರಾಂತಿ ಪಡೆದರೂ ಈ ಪತಂಗ ಎರಡು ವಾರ ಬದುಕಿದರೆ ಅದೇ ಜಾಸ್ತಿ.
ಜೀವನದ ಕೊನೆ ಭಾಗದಲ್ಲಿ ತೀರಾ ಬಲಹೀನವಾಗುವ ಈ ಪತಂಗ ಹಕ್ಕಿಗಳಿಗೋ, ಓತಿಕ್ಯಾತಗಳಿಗೋ, ಇರುವೆಗಳಿಗೋ ಆಹಾರವಾಗುತ್ತದೆ ಎನ್ನುತ್ತಾರೆ, ಪತಂಗ ತಜ್ಞ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಹೆಗಡೆ ಹೊಸಬಾಳೆ. (ಇವರ ಮನೆಯೇ ಪತಂಗಗಳ ಸಂಗ್ರಹಾಲಯ. ಇಲ್ಲಿ ನೂರಾರು ಬಗೆಯ ಪತಂಗಗಳ ಪಳೆಯುಳಿಕೆಗಳಿವೆ.)
ಸಾಮಾನ್ಯವಾಗಿ ಪೇರಳೆ, ಸಂಪಿಗೆ ಸೀಮಿತ ಮರಗಳ ಎಲೆಗಳಲ್ಲಿ ಈ ಪತಂಗ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹುಳುವಾಗಿ ಹೊರಬಂದು, ಆ ಮರದ ಎಲೆಗಳನ್ನೇ ತಿಂದು ಕೋಶ ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗ, ಹೆಣ್ಣು ಪತಂಗದೊಂದಿಗೆ ಸೇರಿ ಸಾಯುತ್ತದೆ. ನಂತರ ಹೆಣ್ಣು ಪತಂಗ ಮೊಟ್ಟೆ ಇಟ್ಟು ಸಾವಿನತ್ತ ಸಾಗುತ್ತದೆ ಎನ್ನುತ್ತಾರೆ, ಮಂಜುನಾಥ ಹೆಗಡೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!