ನ ಟಿಮಣಿಯರು, ಮಾಡೆಲ್’ಗಳು ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿಸೋದು ಕಾಮನ್. ಆದರೆ ಮಲಯಾಳಂನ ಪ್ರಸಿದ್ಧ ಬಾಲನಟಿ ಬಾಳೆಎಲೆ, ದಂಟು ಹಾಗೂ ಬಾಳೆಹೂವು ಧರಿಸಿ ಫೋಟೋ ಶೂಟ್ ಮಾಡಿಸಿದ್ದು, ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಕೇರಳದ ಬಾಲನಟಿ ಹಾಗೂ ಮಾಡೆಲ್ ಅನಿಕಾ ಸುರೇಂದ್ರನ್ ಇಂತಹದೊಂದು ಪರಿಸರಸ್ನೇಹಿ ಕಾನ್ಸೆಪ್ಟ್’ನ ಬಟ್ಟೆ ಧರಿಸಿ ಗಮನಸೆಳೆದಿದ್ದು, ಮಹಿಳೆ ಟಾರ್ಜನ್ ಆದರೆ ಹೇಗಿರಬಹುದೆಂದು ಊಹಿಸುವ ಐಡಿಯಾದಲ್ಲಿ ಈ ಫೋಟೋಶೂಟ್ ನಡೆಸಲಾಗಿದೆಯಂತೆ.
ಇಲ್ಲಿ ಅನಿಕಾ ಬಾಳೆಎಲೆಯನ್ನೇ ಉಡುಗೆಯಂತೆ ಧರಿಸಿದ್ದು, ಬಾಳೆಕುಂಡಿಗೆ ಅಥವಾ ಹೂವಿನ ಪಕಳೆಗಳನ್ನು ಕಿರೀಟದಂತೆ ತಲೆಗೆ ಧರಿಸಿದ್ದಾರೆ. ಇನ್ನು ಬಾಳೆದಿಂಡನ್ನು ಕೈಯಲ್ಲಿ ಹಿಡಿದಿದ್ದು ಈ ಫೋಟೋಶೂಟ್’ನಲ್ಲಿ ಅನಿಕಾ ಮುಖದ ಮುಗ್ಧತೆ ಮನ ಸೆಳೆಯುವಂತಿದೆ.
ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಪೋಸು ಕೊಟ್ಟಿರುವ ಅನಿಕಾ ಸುರೇಂದ್ರನಾಥ್ ಇನ್ನೂ ಟೀನೇಜ್ ಕೂಡ ದಾಟಿಲ್ಲ.
ಹೌದು, ಈಗಾಗಲೇ ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಹೆಸರು ಮಾಡಿರುವ ಅನಿಕಾ ಸುರೇಂದ್ರನಾಥನ್ ಗೆ ಈಗ ಕೇವಲ 15 ವರ್ಷ.
ಮಳೆಯಲ್ಲಿ ನೀರಿನ ಕೊಳದಲಿ… ಸಾರಾ ಅಲಿ ಖಾನ್ Hot Photoshoot
ಛೋಟಾ ಮುಂಬೈ ಚಿತ್ರದ ಮೂಲಕ ಬಣ್ಣ ಹಚ್ಚಿದ ಈ ಬೆಡಗಿ ಈಗಾಗಲೇ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಕೇರಳ ರಾಜ್ಯದ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಪಡೆದಿದ್ದಾರೆ.