newsics.com
ನವರಸನಾಯಕ ಜಗ್ಗೇಶ್ ಅವರು ಹಾಸ್ಯದ ಹೊಳೆಯನ್ನೇ ಹರಿಸಲು ಸಜ್ಜಾಗಿರುವ ತೋತಾಪುರಿ ಚಿತ್ರ ಸೆಪ್ಟೆಂಬರ್ 30ರಂದು ತೆರೆಕಾಣಲಿದೆ. ಬಹುದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಈ ವರ್ಷದ ದಸರಾ ಸಮಯಕ್ಕೆ ತೆರೆಗೆ ಬರಲಿದೆ.
ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ತೋತಾಪುರಿ ಟ್ರೈಲರ್ ಏಪ್ರಿಲ್ನಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು. ಅದು ಸಖತ್ ಹಿಟ್ ಆಗಿತ್ತು. ಅಲ್ಲದೆ ಬಾಗ್ಲು ತೆಗಿ ಮೇರಿ ಜಾನ್ ಸಾಂಗ್ ಕೂಡ ವೈರಲ್ ಆಗಿತ್ತು.
ಜಗ್ಗೇಶ್, ಡಾಲಿ ಧನಂಜಯ್, ಸುಮನಾ ರಂಗನಾಥ್, ಹೇಮಾ ದತ್, ಅದಿತಿ ಪ್ರಭುದೇವ, ದತ್ತಣ್ಣ ಮೊದಲಾದವರು ಅಭಿನಯಿಸಿರುವ ಚಿತ್ರ ಇದಾಗಿದೆ.
#ತೋತಾಪುರಿ ದಸರಹಬ್ಬಕ್ಕೆ ನಿಮ್ಮ ಮುಂದೆ🙏 pic.twitter.com/9Z55A7c3GA
— ನವರಸನಾಯಕ ಜಗ್ಗೇಶ್ (@Jaggesh2) July 1, 2022