newsics.com
ಇತ್ತೀಚೆಗೆ ಸೈಲೆಂಟ್ ಆಗಿ ಎಂಗೇಜ್ ಆಗಿದ್ದ ವಸಿಷ್ಠ ಸಿಂಹ (Vasistasimha) ಮತ್ತು ಹರಿಪ್ರಿಯಾ (Haripriya) ಜೋಡಿ ಸದ್ಯದಲ್ಲೆ ಹಸಮಣೆ ಏರಲಿದೆ.
2023ರ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಸಪ್ತಪದಿ ತುಳಿಯಲು ಇಬ್ಬರೂ ತಾರೆಯರು ಸಿದ್ಧರಾಗಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಶೂಟಿಂಗ್ ವೇಳೆ ವಸಿಷ್ಠ ಮತ್ತು ಹರಿಪ್ರಿಯಾ ಅವರ ಭೇಟಿಯಾಗಿತ್ತು. ಇದಾದ ಬಳಿಕ ತೆಲುಗಿನ ‘ಎವರು’ ರಿಮೇಕ್ನಲ್ಲಿ ಇಬ್ಬರೂ ಜೋಡಿಯಾಗಿ ನಟಿಸಿದ್ದರು.
ಈ ಸಿನಿಮಾನೇ ಒಂದರ್ಥದಲ್ಲಿ ಪ್ರೀತಿಗೆ ತಿರುಗಲು ಕಾರಣ ಎನ್ನಲಾಗಿದೆ. ಬಳಿಕ ವಸಿಷ್ಠ ನಾಯಿಮರಿಯೊಂದನ್ನು ಗಿಫ್ಟ್ ಆಗಿ ಹರಿಪ್ರಿಯಾಗೆ ಕೊಟ್ಟಿದ್ದರು. ಈಮಧ್ಯೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟನೆಯ ಸಿನಿಮಾ 2023ರಲ್ಲಿ ಬಿಡುಗಡೆಯಾಗಲಿದೆ.
ಅತ್ಯಾಚಾರ ಆರೋಪ: ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣು