newsics.com
ಬೆಂಗಳೂರು: ಬಿಗ್ಬಾಸ್ ಸ್ಪರ್ಧಿ ವಿನೋದ್ ಗೊಬ್ಬರಗಾಲ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಈ ಬಾರಿ 11 ಜನರೂ ನಾಮಿನೇಟ್ ಆಗಿದ್ದರು. ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಗೊಬ್ಬರಗಾಲ ಎಲಿಮಿನೇಷನ್ ಇದೀಗ ಮನೆ ಮಂದಿಗೆ ಶಾಕ್ ಕೊಟ್ಟಿದೆ.
ದಿನ ಕಳೆದಂತೆ ಟಾಸ್ಕ್ನಲ್ಲಿ ವಿನೋದ್ ಮಂಕಾಗಿದ್ದರು. ಮೊದಲು ಇದ್ದಂತ ಲವಲವಿಕೆಯಿಂದ ಅವರ ಆಟ ಇರುತ್ತಿರಲಿಲ್ಲ ಎಂಬ ಕಾಮೆಂಟ್ ಜನರಿಂದ ಕೇಳಿಬಂದಿತ್ತು.