ಮುಂಬೈ: ಹಲವು ಮನೆಗಳಲ್ಲಿ ನಾಯಿ, ಬೆಕ್ಕು ಮನೆಯ ಸದಸ್ಯನಷ್ಟೇ ಪ್ರಾಮುಖ್ಯತೆ ಪಡೆದಿರುತ್ತವೆ. ಕೆಲವರು ಮನುಷ್ಯರಿಗಿಂತ ನಾಯಿ, ಬೆಕ್ಕನ್ನೇ ಹೆಚ್ಚಾಗಿ ಪ್ರೀತಿಸುತ್ತಾರೆ. ನಾಯಿ, ಬೆಕ್ಕುಗಳೂ ಅಷ್ಟೇ. ಮನೆಯವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಮಕ್ಕಳಂತೂ ಸಾಕು ಪ್ರಾಣಿಗಳ ಜತೆಯೇ ಹೆಚ್ಚು ಸಮಯ ಕಳೆಯುವ ನಿದರ್ಶನಗಳೂ ಇವೆ.
ಈ ವಿಡಿಯೋವನ್ನೇ ನೋಡಿ, ಪುಟ್ಟ ಬಾಲಕಿ ದೊಡ್ಡ ನಾಯಿಗೆ ಸ್ವಲ್ಪವೂ ಭಯವಿಲ್ಲದೆ ಆಹಾರ ತಿನ್ನಿಸುತ್ತಿದ್ದಾಳೆ. ಸ್ಟ್ರೀಟ್ ಡಾಗ್ ಅಫ್ ಮುಂಬೈ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆದ ಈ ವಿಡಿಯೋ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವನ್ನು ಪ್ರಚುರಪಡಿಸುತ್ತಿದೆ.
ಸುಮಾರು 5 ವರ್ಷದ ಪುಟ್ಟ ಬಾಲಕಿ ತನಗಿಂತ ದೊಡ್ಡದಿರುವ ಜರ್ಮನ್ ಶಫರ್ಡ್ ನಾಯಿಗೆ ಕೈತುತ್ತು ನೀಡುವ ವಿಡಿಯೋ ಇದಾಗಿದೆ. ನಾಯಿಯೂ ಅಷ್ಟೇ ಪ್ರೀತಿಯಿಂದ ಬಾಲಕಿ ಕೈಗೆ ಕೊಂಚವೂ ಹಾನಿಯಾಗದಂತೆ ಕೈತುತ್ತು ತಿನ್ನುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನು ಫಿದಾ ಮಾಡಿದೆ.
https://www.instagram.com/p/CBzywtDH-ZI/?utm_source=ig_embed&utm_campaign=embed_video_watch_again