NEWSICS.COM
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
32ನೇ ವಸಂತಕ್ಕೆ ಕಾಲಿಡುತ್ತಿರುವ ಕೊಹ್ಲಿ ಇಂದು ಪತ್ನಿ ಅನುಷ್ಕಾ ಶರ್ಮಾ ಮತ್ತು ಆರ್ ಸಿ ಬಿ ತಂಡದೊಂದಿಗೆ ಯುಎಇ ಯಲ್ಲಿ ಬರ್ತಡೆ ಆಚರಿಸಿಕೊಂಡಿದ್ದಾರೆ.
ಆರ್‌ಸಿಬಿ ತಮ್ಮ ಅಧಿಕೃತ ಯುಟ್ಯೂಬ್ ಖಾತೆಯಲ್ಲಿ ಕೊಹ್ಲಿಯ ಹುಟ್ಟುಹಬ್ಬದ ಆಚರಣೆಯ ವೀಡಿಯೊವನ್ನು ಹಂಚಿಕೊಂಡಿದೆ.
ಯಜುವೇಂದ್ರ ಚಾಹಲ್ ಹಾಗೂ ಅವರ ಪ್ರೇಯಸಿ ಧನುಶ್ರೀ ವರ್ಮಾ ಕೂಡ ಪಾರ್ಟಿಯಲ್ಲಿ ಭಾಗವಹಿಸಿ ಕಿಂಗ್ ಕೊಹ್ಲಿಗೆ ಶುಭಾಶಯ ಕೋರಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾ ಸೇರಿದಂತೆ ಹಲವರು ವಿರಾಟ್ ಕೊಹ್ಲಿ ಗೆ ವಿಶ್ ಮಾಡಿದ್ದಾರೆ.