ದುಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ದುಬೈನಲ್ಲಿ 19ರಂದು ಪಂದ್ಯ ಆರಂಭವಾಗಲಿದೆ. ಅಭ್ಯಾಸದ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡಿರುವ ಕೊಹ್ಲಿ ಈಜುಕೊಳದಲ್ಲಿ ವಿಹರಿಸಿದ್ದಾರೆ. ಸತತ ಅಭ್ಯಾಸದ ಬಳಿಕ ಸ್ವಲ್ಪ ರಿಲಾಕ್ಸ್ ನತ್ತ ಮನಸ್ಸು ಮಾಡಿದ್ದಾರೆ. ತಂಡದ ಇತರ ಆಟಗಾರರ ಜತೆಗೆ ಅವರು ಈಜುಕೊಳದಲ್ಲಿ ಈಜಾಡಿದ್ದಾರೆ.
ದುಬೈನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು ಬಿಸಿಲಿನ ಝಳದ ಮಧ್ಯೆ ಕೊಹ್ಲಿ ಈಜುಕೊಳದಲ್ಲಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ