Wednesday, July 6, 2022

ಯಶ್ ಲುಕ್’ಗೆ ಬಾಲಿವುಡ್ ಸ್ಟಾರ್’ಗಳೇ ಶಾಕ್!

Follow Us

 ಕೆ ಜಿಎಫ್ ಸ್ಯಾಂಡಲ್‍ವುಡ್‍ನಲ್ಲಿ ಹಲವು ಹೊಸ ಮೈಲಿಗಲ್ಲುಗಳನ್ನು ನಿರ್ಮಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಲವು ಹೊಸ ದಾಖಲೆಗಳಿಗೆ ಮುನ್ನುಡಿ ಬರೆಯಿತು. ಅಷ್ಟೇ ಅಲ್ಲ ರಾಕಿಂಗ್ ಸ್ಟಾರ್ ಯಶ್‍ಗೆ ಬದುಕಿನ ಬಹುದೊಡ್ಡ ಯಶಸ್ಸು ತಂದುಕೊಟ್ಟ ಚಿತ್ರ ಇದು. ಇದೀಗ ಕೆಜಿಎಫ್-2 ಚಿತ್ರ ಚಿತ್ರೀಕರಣ ಹಾಗೂ ಬಿಡುಗಡೆಗೆ ಸಿದ್ಧವಾಗುವ ಹೊತ್ತಿನಲ್ಲೆ ಬಾಲಿವುಡ್‍ನ ಸ್ಟಾರ್‍ಗಳನ್ನು ಹಿಂದಿಕ್ಕುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಇದುವರೆಗೂ ಕೆಜಿಎಫ್-2 ದ ಕೇವಲ ಎರಡು ಲುಕ್‍ಗಳು ಮಾತ್ರ ರಿಲೀಸ್ ಆಗಿದ್ದರೂ ಬಾಲಿವುಡ್ ಸ್ಟಾರ್ ಗಳು ಶಾಕ್ ಆಗುವಂತೆ ಸಾಧನೆ ಮಾಡಿದ್ದು, ಓರ್ಮಾಕ್ಸ್ ಮೀಡಿಯಾ ಸರ್ವೇಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಬಾಲಿವುಡ್‍ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಹಾಗೂ ಅಜಯ್ ದೇವಗನ್‍ರನ್ನು ಹಿಂದಿಕ್ಕಿದೆ.
ಓರ್ಮಾಕ್ಸ್ ಮೀಡಿಯಾ ಭಾರತೀಯ ಸಿನಿಮಾ, ವೆಬ್ ಸಿರೀಸ್ ಹಾಗೂ ಟಿವಿಶೋಗಳ ಬಗ್ಗೆ ನಿರಂತರವಾಗಿ ಸಮೀಕ್ಷೆ ನಡೆಸುತ್ತಿದ್ದು, ಬಾಲಿವುಡ್‍ನ ಯಾವ ಚಿತ್ರಕ್ಕಾಗಿ ಜನರು ಕಾಯುತ್ತಿದ್ದಾರೆ ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ -2 ಚಿತ್ರ ಸತತ 6 ತಿಂಗಳಿನಿಂದ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಬಾಲಿವುಡ್‍ನ ಸ್ಟಾರ್ ನಟರನ್ನು ಕಂಗೆಡಿಸಿದೆ.
ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೆಜಿಎಫ್-2 ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸಂಜಯ್ ದತ್, ರವೀನಾ ಟಂಡನ್,ಶ್ರೀನಿಧಿ ಶೆಟ್ಟಿ ತಾರಾಗಣದಲ್ಲಿದ್ದಾರೆ. ಓರ್ಮಾಕ್ಸ್ ಮೀಡಿಯಾ ಸರ್ವೇಯಲ್ಲಿ ಮಾರ್ಚನಿಂದ ಜುಲೈಯವರೆಗೂ ಯಶ್ ರ ಕೆಜಿಎಫ್- 2 ಮೊದಲ ಸ್ಥಾನದಲ್ಲಿದ್ದು, ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ರಣವೀರ್ ಸಿಂಗ್, ಅಮೀರ್ ಖಾನ್, ಅಜಯ್ ದೇವಗನ್ ಚಿತ್ರಗಳನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಕೆಜಿಎಫ್-2 ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಭೀತಿಯಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಚಿತ್ರತಂಡ ಕಂಗಾಲಾಗಿದ್ದು, ಕೊನೆಯ ಹಂತದ ಚಿತ್ರೀಕರಣ, ಎಡಿಟಿಂಗ್, ಪ್ರಮೋಶನ್ ಮುಗಿಸಿ ತೆರೆಗೆ ತರೋದು ಚಿತ್ರತಂಡಕ್ಕೆ ಸವಾಲಾಗಿ ಪರಿಣಮಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!