Wednesday, September 27, 2023

ಕುಗ್ಗಿದ ಜೀವವೈವಿಧ್ಯ ತಾಣಗಳು

Follow Us

ಶೇ.90ರಷ್ಟು ಜೀವವೈವಿಧ್ಯದ ಹಾಟ್ ಸ್ಪಾಟ್’ಗಳೇ ನಾಶ

ಭಾರತ ಜೀವವೈವಿಧ್ಯದ ನೆಲೆನಾಡು, ಜೀವ ಪ್ರಭೇದಗಳ ನೆಲೆವೀಡು. ಆದರೆ, ಜೀವವೈವಿಧ್ಯ ಪ್ರದೇಶಗಳ ಶೇ.90ರಷ್ಟು ವ್ಯಾಪ್ತಿಯೇ ಕುಗ್ಗಿಹೋಗಿದೆ ಎನ್ನುತ್ತಿವೆ ಅಧ್ಯಯನಗಳು.

newsics.com Features Desk

ಭಾರತ ಜೀವವೈವಿಧ್ಯದಿಂದ ಶ್ರೀಮಂತವಾಗಿರುವ ದೇಶಗಳಲ್ಲಿ ಒಂದು ಎನ್ನುವುದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಆದರೆ, ಈ ಜೀವವೈವಿಧ್ಯದ ನೆಲೆದಾಣ ಶೇ.90ರಷ್ಟು ನಾಶವಾಗಿದೆ!
ವಿಜ್ಞಾನ ಮತ್ತು ಪರಿಸರ ಕೇಂದ್ರ ಬಿಡುಗಡೆ ಮಾಡಿರುವ ನೂತನ ವರದಿಯೊಂದು, ಭಾರತದ ಜೀವವೈವಿಧ್ಯದ ಹಾಟ್ ಸ್ಪಾಟ್ ಪ್ರದೇಶದಲ್ಲಿ ಶೇ.90ರಷ್ಟು ನಷ್ಟವಾಗಿದೆ ಎಂದು ಹೇಳಿದೆ.
ಇಂಡೋ-ಬರ್ಮಾ ಜೀವವೈವಿಧ್ಯ ವಲಯ ಅತ್ಯಂತ ಕೆಟ್ಟದಾಗಿ ಪರಿಣಾಮ ಕಂಡಿರುವ ಪ್ರದೇಶವಾಗಿದೆ. ಈ ಭಾಗದ ಜೀವವೈವಿಧ್ಯ ಕೇಂದ್ರಗಳ ಶೇ.95 ರಷ್ಟು ಪ್ರದೇಶ ಹಾನಿಗೆ ಒಳಗಾಗಿದೆ. 23 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಿಂದ 1.18 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಗೆ ಇಳಿದಿದೆ. ನಾಲ್ಕು ಹಾಟ್ ಸ್ಪಾಟ್ ಗಳಲ್ಲಿ ಸರಿಸುಮಾರು 25 ಪ್ರಾಣಿಗಳು ನಶಿಸಿಹೋಗಿವೆ.
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಕೆಂಪು ಪಟ್ಟಿಯಲ್ಲಿ ಅಂದರೆ, ಅಪಾಯದಲ್ಲಿರುವ ಭಾರತದ 1212 ಪ್ರಾಣಿ ಪ್ರಭೇದಗಳ ಕುರಿತು ಮೇಲ್ವಿಚಾರಣೆ ನಡೆಸಿತ್ತು. ಇವುಗಳಲ್ಲಿ ಶೇ.12ರಷ್ಟು ಪ್ರಾಣಿಗಳು ಅಂದರೆ 148 ತಳಿಗಳು ಅಳಿವಿನಂಚಿನಲ್ಲಿವೆ. 69 ಸಸ್ತನಿಗಳು, 23 ಸರೀಸೃಪಗಳು, 56 ಉಭಯಚರ ಜೀವಿಗಳು ಅಳಿವಿನ ಅಂಚಿನಲ್ಲಿರುವುದು ಪತ್ತೆಯಾಗಿತ್ತು.
ಅರಣ್ಯಕ್ಕೆ ಬೆಂಕಿ ಬೀಳುವುದು ಸಹ ಇಲ್ಲಿನ ಪ್ರಮುಖ ಕಾರಣಗಳಲ್ಲಿ ಒಂದೆಂದು ಗುರುತಿಸಲಾಗಿದೆ.
2016 ಅತ್ಯಂತ ಸೆಖೆ ವರ್ಷ
ಒಡಿಶಾ, ಛತ್ತೀಸ್ ಗಢ, ಉತ್ತರಾಖಂಡ್, ಮಧ್ಯಪ್ರದೇಶ ಸೇರಿದಂತೆ 16 ರಾಜ್ಯಗಳಲ್ಲಿ ಕಾಡ್ಗಿಚ್ಚು ಪ್ರಮಾಣ ಹೆಚ್ಚು. ವರ್ಷ ಸುಮಾರು 4 ಲಕ್ಷಕ್ಕೂ ಅಧಿಕ ಬಾರಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ 2016 ಅತ್ಯಧಿಕ ಉಷ್ಣದ ವರ್ಷವಾಗಿ ದಾಖಲಾಗಿದೆ. ಭಾರತದ ವಾರ್ಷಿಕ ತಾಪಮಾನ ಆ ವರ್ಷ ಸಾಮಾನ್ಯಕ್ಕಿಂತ 0.71 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಿತ್ತು. ಆ ವರ್ಷ 5 ಲಕ್ಷಕ್ಕೂ ಅಧಿಕ ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದುದು ಗಮನಾರ್ಹ. ಅಲ್ಲದೆ, ಈ ಸಂಖ್ಯೆ ಆ ದಶಕದಲ್ಲೇ ಅತ್ಯಧಿಕ ಸಂಖ್ಯೆಯಾಗಿ ದಾಖಲಾಗಿದೆ.
ಪರಿಸರದ ವ್ಯವಸ್ಥೆ ಕುಸಿತ
ಕಾರ್ಬನ್ ಹೀರಿಕೊಳ್ಳುವ ಅನೇಕ ಪಾರಿಸಾರಿಕ ವ್ಯವಸ್ಥೆಗಳಲ್ಲಿ ಕುಸಿತ ಕಂಡುಬಂದಿದೆ. ಪರಿಸರದಿಂದ ಇಂಗಾಲ ಹೀರಿಕೊಳ್ಳುವ ಅಥವಾ ನಿವಾರಣೆ ಮಾಡುವ ವ್ಯವಸ್ಥೆ ಜಾಗತಿಕ ತಾಪಮಾನವನ್ನೂ ನಿಯಂತ್ರಿಸುತ್ತವೆ. ನೈಸರ್ಗಿಕವಾಗಿ ಜೈವಿಕ ವ್ಯವಸ್ಥೆಯಲ್ಲಿ, ರಾಸಾಯನಿಕ ಪ್ರಕ್ರಿಯೆ ಮೂಲಕ ಇದು ಜರುಗುತ್ತಿರುತ್ತದೆ. ಇಂತ ವ್ಯವಸ್ಥೆಯೇ ಕುಸಿದು ಹೋದರೆ ಪರಿಸರದಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಹಾಗೆಯೇ ಉಳಿದುಹೋಗುತ್ತದೆ. ಕಾರ್ಬನ್ ಹೀರಿಕೊಳ್ಳುವ ಪರಿಸರದ ವ್ಯವಸ್ಥೆ ಮಾನವನ ಹಸ್ತಕ್ಷೇಪದಿಂದ ಕುಂಠಿತವಾಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೀವವೈವಿಧ್ಯ ಹಾಟ್ ಸ್ಪಾಟ್ ಕೇಂದ್ರಗಳಲ್ಲಿ ಶೇ.90ರಷ್ಟು ಕುಸಿತವುಂಟಾಗಿರುವುದು ಚಿಂತೆಯ ಸಂಗತಿಯೇ ಸರಿ. ಮಾನವನ ಹಸ್ತಕ್ಷೇಪವನ್ನು ಮಿತಿಗೊಳಿಸುವುದೇ ಇದಕ್ಕಿರುವ ಪರಿಹಾರ.

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!